alex Certify ಪ್ರೀತಿಯ ಪತ್ನಿಗೆ ಇಂಡಿಗೊ ಪೈಲಟ್ ಕೊಟ್ಟ ʼಸರ್ಪ್ರೈಸ್ʼ ಏನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಯ ಪತ್ನಿಗೆ ಇಂಡಿಗೊ ಪೈಲಟ್ ಕೊಟ್ಟ ʼಸರ್ಪ್ರೈಸ್ʼ ಏನು ಗೊತ್ತಾ….?

ಹುಡುಗಿಯರಿಗೆ ಸರ್ಪ್ರೈಸ್ ಅಂದ್ರೆ ಇಷ್ಟ….. ಅದರಲ್ಲೂ ಪ್ರೀತಿಸಿದ ಹುಡುಗ ಆಗಾಗ ಸರ್ಪ್ರೈಸ್ ಕೊಡ್ತಿದ್ರೆ ಪ್ರೀತಿಯ ಸುರಿಮಳೆಯನ್ನೇ ಸುರಿಸಿಬಿಡ್ತಾರೆ. ಪ್ರೀತಿಸುವಾಗ ಇದೆಲ್ಲ ಚೆನ್ನಾಗಿಯೇ ಇರುತ್ತೆ. ಆದರೆ ಸಂಸಾರದ ಜಂಜಾಟಗಳು ಯಾವಾಗ ಶುರುವಾಗುತ್ತೊ ಆಗ ರೊಮ್ಯಾನ್ಸ್, ಸರ್ಪ್ರೈಸ್​ ಗಳೆಲ್ಲ ಮರೀಚಿಕೆ ಆಗ್ಬಿಡುತ್ತೆ. ಆದರೆ ಇಲ್ಲೊಬ್ಬ ಪತಿರಾಯ ಇದ್ದಾನೆ ನೋಡಿ, ತನ್ನ ಪ್ರೀತಿಯ ಪತ್ನಿಗೆ ಕೊಟ್ಟ ಸರ್ಪ್ರೈಸ್ ನೋಡೇ ಎಲ್ಲರೂ ಗಂಡ ಇದ್ದರೆ ಹೀಗಿರಬೇಕು ಅಂತ ಹೇಳ್ತಿದ್ದಾರೆ.

ಈ ಮಿಸ್ಟರ್ ಪತಿರಾಯ ಇಂಡಿಗೊ ಪ್ಲೇನ್​ನ ಪೈಲಟ್. ಅದೇ ಪ್ಲೇನ್​ನಲ್ಲಿ ಪೈಲಟ್​ನ ಪತ್ನಿ ಕೂಡಾ ಪ್ರಯಾಣಿಸುತ್ತಿದ್ದಳು. ಇನ್ನೇನು ಪ್ರಯಾಣಿಕರು ಸೀಟ್​ಲ್ಲಿ ಕೂತು ಬೆಲ್ಟ್ ಹಾಕಿಕೊಳ್ಳಬೇಕು ಅಂದುಕೊಳ್ಳುವಷ್ಟರಲ್ಲಿ ಒಂದು ಅನೌನ್ಸ್ಮೆಂಟ್ ಶುರುವಾಗಿತ್ತು. ಆ ಅನೌನ್ಸ್ಮೆಂಟ್ ಮಾಡ್ತಿದ್ದಿದ್ದು ಅದೇ ಆ ಪೈಲಟ್ ಪತಿರಾಯ. ಆ ಪೈಲಟ್ ಮಾಡಿದ್ದ ಆ ಅನೌನ್ಸ್ಮೆಂಟ್ ಆ ಪ್ಲೇನ್​ನಲ್ಲಿದ್ದ ಎಲ್ಲ ಪ್ರಯಾಣಿಕರು ಫಿದಾ ಆಗಿ ಹೋದ್ರು.

ಪೈಲಟ್ ಅಲ್ನೀಜ್ ವಿರಾನಿ, ತಮ್ಮ ಪತ್ನಿ ಜೆಹ್ರಾ ಪ್ಲೇನ್​ಲ್ಲಿ ಕುಳಿತುಕೊಳ್ಳುವ ತನಕವೂ ಸೈಲೆಂಟಾಗಿಯೇ ಇದ್ದರು. ಕೊನೆಗೆ ಒಮ್ಮಿಂದೊಮ್ಮೆ ಮೈಕ್​ಲ್ಲಿ ತಮ್ಮ ಪತ್ನಿಯ ಹೆಸರನ್ನ ಕರೆದರು. ಅದನ್ನ ಕೇಳಿ ಜೆಹ್ರಾ, ಶಾಕ್ ಆದ್ರು, ಅಷ್ಟು ಖುಷಿಯಾದ್ರೂ ಕೂಡಾ ತಕ್ಷಣವೇ ಆ ಒಂದು ಮೊಮೆಂಟ್ ನ್ನು ತಮ್ಮ ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿಕೊಂಡರು.

ಪೈಲಟ್ ಸ್ಟೈಲ್​ನಲ್ಲಿ ವಿರಾನಿ ಇಂಟರ್ಕಾಮ್ ಮೈಕ್​ಲ್ಲಿ ` ಹೆಲೋ ನಾವು ಅಲ್ನಿಜ್ ವಿರಾನಿ ಈ ಪ್ಲೇನ್​ನ ಪೈಲಟ್. ನನ್ನ ಮಾತು ನಿಮಗೆಲ್ಲ ಕೇಳಿಸುತ್ತಿದೆ ಅಂತ ಭಾವಿಸುತ್ತೇನೆ. ಈಗ ಹೊರಡುತ್ತಿರೋ ಈ ಫ್ಲೈಟ್ ನನ್ನ ಪಾಲಿಗೆ ವಿಶೇಷವಾಗಿರೋದು. ಇದೇ ವಿಮಾನದಲ್ಲಿ ನಿಮ್ಮೆಲ್ಲರ ಮಧ್ಯದಲ್ಲಿ ನಾನು ಪ್ರೀತಿಸಿದವಳು ಪ್ರಯಾಣಿಸುತ್ತಿದ್ದಾಳೆ. ಆಕೆ ನನ್ನ ಹೆಂಡತಿ ಜೆಹ್ರಾ. ಇಂದು ನಾನು ಆಕೆಗೆ ಈ ಪ್ಲೇನ್ ಮೂಲಕ ಮುಂಬೈಗೆ ಕರೆದುಕೊಂಡು ಹೋಗುವ ಭಾಗ್ಯ ಸಿಕ್ಕಿದೆ. ಇದು ಚಿಕ್ಕ ವಿಷಯವಾದರೂ ನನ್ನ ಪಾಲಿಗೆ ಮರೆಯಲಾಗದ ಕ್ಷಣ. ಇದೇ ಕಾರಣಕ್ಕೆ ನಿಮ್ಮೆಲ್ಲರ ಜೊತೆ ಈ ಸಂತೋಷವನ್ನ ಹಂಚಿಕೊಳ್ಳುತ್ತಿದ್ದೇನೆ.`

ತನ್ನ ಗಂಡ ವ್ಯಕ್ತಪಡಿಸಿರೋ ಪ್ರೀತಿಯ ರೀತಿಗೆ ಜೆಹ್ರಾ ಮೂಕಸ್ಮಿತರಾಗಿದ್ದಾರೆ. ಗಂಡ ಅನಿರಿಕ್ಷಿತವಾಗಿ ಕೊಟ್ಟ ಸಪ್ರೈಸ್ ನೋಡಿ ಭಾವುಕರಾಗಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದೆ. ಎಷ್ಟೋ ಜನರು ಈ ವಿಡಿಯೋ ನೋಡಿ ಜೆಹ್ರಾ ಅವರಿಗೆ ಇದು ನಿಮ್ಮ ಅದೃಷ್ಟ ಅಂತ ಹೇಳಿದ್ದಾರೆ. ಈ ವಿಡಿಯೋ ಈಗಾಗಲೇ 7.6 ಮಿಲಿಯನ್ ವೀಕ್ಷಣೆಯನ್ನ ಹೊಂದಿದೆ. ಜೊತೆಗೆ 703k ಲೈಕ್ಸ್​ಗಳನ್ನ ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...