alex Certify ಕೇವಲ 1400 ರೂ.ಗೆ ಮಾಡಿ ವಿಮಾನ ಪ್ರಯಾಣ..! ಇಂಡಿಗೋ ನೀಡ್ತಿದೆ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 1400 ರೂ.ಗೆ ಮಾಡಿ ವಿಮಾನ ಪ್ರಯಾಣ..! ಇಂಡಿಗೋ ನೀಡ್ತಿದೆ ಆಫರ್

ದೇಶದ ಸುಂದರ ಸ್ಥಳಗಳನ್ನು ಸುತ್ತುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಅಗ್ಗದ ದರದಲ್ಲಿ ಸುಂದರ ಪ್ರದೇಶ ವೀಕ್ಷಣೆಯ ಅವಕಾಶ ಸಿಗ್ತಿದೆ. ಅದೂ ವಿಮಾನದಲ್ಲಿ ಕಡಿಮೆ ದರದಲ್ಲಿ ನೀವು ಪ್ರವಾಸಕ್ಕೆ ತೆರಳಬಹುದು. ಇಂಡಿಗೋ ಕಂಪನಿ ನಿಮಗೆ ಈ ಸೌಲಭ್ಯ ನೀಡ್ತಿದೆ.

ಕೊರೊನಾ ಕಡಿಮೆಯಾಗ್ತಿದ್ದಂತೆ ಜನರು ಮನೆಯಿಂದ ಹೊರ ಬೀಳ್ತಿದ್ದಾರೆ. ಡಿಸೆಂಬರ್ ರಜೆಗೆ ಈಗಾಗಲೇ ಪ್ಲಾನಿಂಗ್ ನಡೆದಿದೆ. ಅಂಥವರಿಗೆ ಇಂಡಿಗೋ ಕಂಪನಿ ನೆರವಾಗ್ತಿದೆ. ತಡೆರಹಿತ ವಿಮಾನ ಪ್ರಯಾಣ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈಗಾಗಲೇ ಇಂಡಿಗೋ, ಮೊದಲ ಶಿಲ್ಲಾಂಗ್ -ದಿಬ್ರುಗಢ್ ನಡುವೆ ನೇರ ವಿಮಾನ ಹಾರಾಟ ಶುರು ಮಾಡಿದೆ. ಇದರ ಆರಂಭಿಕ ದರ ಕೇವಲ 1400 ರೂಪಾಯಿಗಳು.

ಇಂಡಿಗೋ ವೆಬ್‌ಸೈಟ್‌ನಲ್ಲಿ ಪ್ರಯಾಣದ ಬಗ್ಗೆ ನೀವು ಮಾಹಿತಿ ಪಡೆಯಬಹುದು. ಪ್ರಯಾಣಿಕರು ಇಂಡಿಗೋ ವಿಮಾನಗಳ ಟಿಕೆಟ್‌ಗಳನ್ನು ಏರ್‌ಲೈನ್‌ನ ಅಧಿಕೃತ ವೆಬ್‌ಸೈಟ್ https://www.goindigo.in/  ಗೆ ಭೇಟಿ ನೀಡುವ ಮೂಲಕ ಬುಕ್ ಮಾಡಬಹುದು.

ಜನರು ಶಿಲ್ಲಾಂಗ್ ಮತ್ತು ದಿಬ್ರುಗಢ್ ನಡುವೆ ಪ್ರಯಾಣಿಸಲು ರಸ್ತೆ ಮತ್ತು ರೈಲಿನ ಪ್ರಯಾಣ ನಡೆಸುತ್ತಿದ್ದರು. ಈ ಪ್ರಯಾಣ ಸುದೀರ್ಘ 12 ಗಂಟೆ ತೆಗೆದುಕೊಳ್ಳುತ್ತದೆ. ಆದ್ರೀಗ ವಿಮಾನ ಪ್ರಯಾಣ, ಪ್ರವಾಸವನ್ನು ಸುಲಭಗೊಳಿಸಿದೆ. ಕೇವಲ 75 ನಿಮಿಷಗಳಲ್ಲಿ ಗಮ್ಯಸ್ಥಳ ತಲುಪಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...