ದೇಶದ ಸುಂದರ ಸ್ಥಳಗಳನ್ನು ಸುತ್ತುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಅಗ್ಗದ ದರದಲ್ಲಿ ಸುಂದರ ಪ್ರದೇಶ ವೀಕ್ಷಣೆಯ ಅವಕಾಶ ಸಿಗ್ತಿದೆ. ಅದೂ ವಿಮಾನದಲ್ಲಿ ಕಡಿಮೆ ದರದಲ್ಲಿ ನೀವು ಪ್ರವಾಸಕ್ಕೆ ತೆರಳಬಹುದು. ಇಂಡಿಗೋ ಕಂಪನಿ ನಿಮಗೆ ಈ ಸೌಲಭ್ಯ ನೀಡ್ತಿದೆ.
ಕೊರೊನಾ ಕಡಿಮೆಯಾಗ್ತಿದ್ದಂತೆ ಜನರು ಮನೆಯಿಂದ ಹೊರ ಬೀಳ್ತಿದ್ದಾರೆ. ಡಿಸೆಂಬರ್ ರಜೆಗೆ ಈಗಾಗಲೇ ಪ್ಲಾನಿಂಗ್ ನಡೆದಿದೆ. ಅಂಥವರಿಗೆ ಇಂಡಿಗೋ ಕಂಪನಿ ನೆರವಾಗ್ತಿದೆ. ತಡೆರಹಿತ ವಿಮಾನ ಪ್ರಯಾಣ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈಗಾಗಲೇ ಇಂಡಿಗೋ, ಮೊದಲ ಶಿಲ್ಲಾಂಗ್ -ದಿಬ್ರುಗಢ್ ನಡುವೆ ನೇರ ವಿಮಾನ ಹಾರಾಟ ಶುರು ಮಾಡಿದೆ. ಇದರ ಆರಂಭಿಕ ದರ ಕೇವಲ 1400 ರೂಪಾಯಿಗಳು.
ಇಂಡಿಗೋ ವೆಬ್ಸೈಟ್ನಲ್ಲಿ ಪ್ರಯಾಣದ ಬಗ್ಗೆ ನೀವು ಮಾಹಿತಿ ಪಡೆಯಬಹುದು. ಪ್ರಯಾಣಿಕರು ಇಂಡಿಗೋ ವಿಮಾನಗಳ ಟಿಕೆಟ್ಗಳನ್ನು ಏರ್ಲೈನ್ನ ಅಧಿಕೃತ ವೆಬ್ಸೈಟ್ https://www.goindigo.in/ ಗೆ ಭೇಟಿ ನೀಡುವ ಮೂಲಕ ಬುಕ್ ಮಾಡಬಹುದು.
ಜನರು ಶಿಲ್ಲಾಂಗ್ ಮತ್ತು ದಿಬ್ರುಗಢ್ ನಡುವೆ ಪ್ರಯಾಣಿಸಲು ರಸ್ತೆ ಮತ್ತು ರೈಲಿನ ಪ್ರಯಾಣ ನಡೆಸುತ್ತಿದ್ದರು. ಈ ಪ್ರಯಾಣ ಸುದೀರ್ಘ 12 ಗಂಟೆ ತೆಗೆದುಕೊಳ್ಳುತ್ತದೆ. ಆದ್ರೀಗ ವಿಮಾನ ಪ್ರಯಾಣ, ಪ್ರವಾಸವನ್ನು ಸುಲಭಗೊಳಿಸಿದೆ. ಕೇವಲ 75 ನಿಮಿಷಗಳಲ್ಲಿ ಗಮ್ಯಸ್ಥಳ ತಲುಪಬಹುದಾಗಿದೆ.