ಭಾರತದ ಮಹಿಳೆಯರ (ಫರ್ಟಿಲಿಟಿ) ಫಲವತ್ತತೆ ದರವು 2.0ಗೆ (ದೇಶದ ಮಹಿಳೆಯರಿಗೆ ಸರಾಸರಿ ಜನಿಸುವ ಮಕ್ಕಳ ದರ) ಇಳಿದಿರುವ ನಡುವೆ ದೇಶದ ಜನಸಂಖ್ಯೆಯಲ್ಲಿ ಸ್ಥಿರತೆ ಕಂಡು ಬರುತ್ತಿದೆ ಎಂದು ಆರೋಗ್ಯ ಹಾಗೂ ಕುಟುಂಬ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್-5) ತಿಳಿಸಿದೆ. ಈ ಹಿಂದೆ, 2015-16ರಲ್ಲಿ ಒಟ್ಟಾರೆ ಫಲವತ್ತತೆ ದರ (ಟಿಎಫ್‌ಆರ್) 2.2 ಇತ್ತು.
ಮಧ್ಯ ಪ್ರದೇಶ, ರಾಜಸ್ಥಾನ, ಜಾರ್ಖಂಡ್, ಬಿಹಾರ, ಮತ್ತು ಉತ್ತರ ಪ್ರದೇಶ ಹೊರತುಪಡಿಸಿ ದೇಶದ ಎಲ್ಲಾ ರಾಜ್ಯಗಳಲ್ಲೂ ಟಿಎಫ್‌ಆರ್ 2.1ಕ್ಕೆ ಕುಸಿದಿದೆ.
ಎನ್‌ಎಚ್‌ಎಫ್‌ಎಸ್‌ನ ಐದನೇ ಹಂತದ ಎರಡನೇ ಸ್ತರದಲ್ಲಿ 14 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಸರ್ವೇಯ ಮೊದಲ ಹಂತವನ್ನು 2020ರಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೋವಿಡ್-19 ಕಾರಣದಿಂದಾಗಿ 2019-21ರ ನಡುವಿನ ಎರಡು ವರ್ಷಗಳ ಅವಧಿಯುದ್ದಕ್ಕೂ ಎನ್‌ಎಫ್‌ಎಚ್‌ಎಸ್-5ಅನ್ನು ಹಮ್ಮಿಕೊಳ್ಳಲಾಗಿತ್ತು.
ಜಾತಕದಲ್ಲಿ ಈ ದೋಷ ಕಂಡು ಬಂದ್ರೆ ಪರಿಹಾರ ಕಷ್ಟ
ದೇಶದ ಒಟ್ಟಾರೆ ಗರ್ಭನಿರೋಧಕದ ದರ (ಸಿಪಿಆರ್) 54%ನಿಂದ 67%ಗೆ ಏರಿಕೆಯಾಗಿದೆ. ಬಹುತೇಕ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ಆಧುನಿಕ ಗರ್ಭನಿರೋಧಕ ಕ್ರಮಗಳನ್ನು ಬಳಸುವ ಅಭ್ಯಾಸ ಹೆಚ್ಚಾಗುತ್ತಿದೆ ಎಂದು ಕಂಡುಬಂದಿದೆ. ಇದರೊಂದಿಗೆ ಕುಟುಂಬ ಯೋಜನೆಯ ಅಗತ್ಯಗಳಲ್ಲಿ 13% ರಿಂದ 9%ಗೆ ಇಳಿಕೆ ಕಂಡು ಬಂದಿದೆ.
ಕಳೆದ ಐದು ವರ್ಷಗಳಲ್ಲಿ ಲಿಂಗಾನುಪಾತದಲ್ಲಿ ಬಹಳಷ್ಟು ಸುಧಾರಣೆ ಕಂಡು ಬಂದಿದೆ. 2015-16ರ ಸರ್ವೇ ಅವಧಿಯಲ್ಲಿ ಹುಟ್ಟುವ ಪ್ರತಿ 1000 ಗಂಡುಮಕ್ಕಳಿಗೆ 991 ಹೆಣ್ಣುಮಕ್ಕಳಾದಲ್ಲಿ ಪ್ರಸಕ್ತ ಸಮೀಕ್ಷೆ ಅವಧಿಯಲ್ಲಿ 1000 ಗಂಡು ಮಕ್ಕಳಿಗೆ 1020 ಹೆಣ್ಣುಮಕ್ಕಳು ಜನಿಸಿದ್ದಾರೆ ಎಂದು ಕಂಡು ಬಂದಿದೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ; 20-24 ವರ್ಷ ವಯಸ್ಸಿನೊಳಗಿನ ಮಹಿಳೆಯರ ಪೈಕಿ 18ರ ವಯಸ್ಸಿನೊಳಗೇ ಮದುವೆಯಾದವರ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಇದೇ ಅವಧಿಯಲ್ಲಿ, 15-19 ವರ್ಷದೊಳಗಿನ ಹೆಣ್ಣುಮಕ್ಕಳಲ್ಲಿ ಮಗು ಹೆರುವ ಸಾಧ್ಯತೆಗಳಲ್ಲೂ ಇಳಿಕೆ ಕಂಡು ಬಂದಿದೆ.