alex Certify ಆಹಾರೋತ್ಪನ್ನಗಳ ಮಾಸಿಕ ಹಣದುಬ್ಬರದಲ್ಲಿ ಶೇ.5.59 ರಷ್ಟು ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಹಾರೋತ್ಪನ್ನಗಳ ಮಾಸಿಕ ಹಣದುಬ್ಬರದಲ್ಲಿ ಶೇ.5.59 ರಷ್ಟು ಏರಿಕೆ

ಅತ್ಯಗತ್ಯ ವಸ್ತುಗಳ ಬೆಲೆಗಳಲ್ಲಿ ಏರಿಕೆಯ ದರ ಆರು ತಿಂಗಳ ಗರಿಷ್ಠ ಮಟ್ಟ ತಲುಪಿದ ಕಾರಣ ಡಿಸೆಂಬರ್‌ನ ಮಾಸಿಕ ಹಣದುಬ್ಬರ 5.59% ತಲುಪಿದ್ದು, ಆರ್‌.ಬಿ.ಐ. ಈ ವಿಚಾರವಾಗಿ ನಿಗದಿಪಡಿಸಿದ ಸಹಿಷ್ಣುತೆಯ ದರವಾದ 6%ಗಿಂತ ಸ್ವಲ್ಪ ಕಡಿಮೆ ಇದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿತ ಚಿಲ್ಲರೆ ಹಣದುಬ್ಬರ ಮಟ್ಟವು ನವೆಂಬರ್‌ನಲ್ಲಿ 4.91 ಪ್ರತಿಶತ ಇದ್ದು, ಡಿಸೆಂಬರ್‌ನಲ್ಲಿ 5.59%ಗೆ ಏರಿದೆ.

ರೈತ ಸಮುದಾಯಕ್ಕೆ ಮುಖ್ಯ ಮಾಹಿತಿ: ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಮಾಡಿಸಿ

ಸಾಮಾನ್ಯವಾಗಿ ಸಿಪಿಐ ಆಧರಿತ ಚಿಲ್ಲರೆ ಹಣದುಬ್ಬರದ ಲೆಕ್ಕಾಚಾರವನ್ನು ಮುಖ್ಯವಾಗಿ ಪರಿಗಣಿಸಿ ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ರಚಿಸುವ ಆರ್‌.ಬಿ.ಐ., ಹಣದುಬ್ಬರವನ್ನು ಸಾಧ್ಯವಾದಷ್ಟು 4%ದಲ್ಲಿ ಕಾಪಾಡಿಕೊಳ್ಳಲು ಸರ್ಕಾರಕ್ಕೆ ಸೂಚಿಸಿದ್ದು, ಆ ಮಟ್ಟದ 2%ನಷ್ಟು ಹಿಂದೆ/ಮುಂದೆ ಆದಲ್ಲಿ (2-6%) ಅದನ್ನು ಸಹಿಷ್ಣು ಮಟ್ಟವಾಗಿ ನಿರ್ಧರಿಸಿದೆ.

ಅಕ್ಟೋಬರ್‌ 2021ರಿಂದ ಚಿಲ್ಲರೆ ಹಣದುಬ್ಬರ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಜುಲೈನಲ್ಲೂ ಸಹ ಚಿಲ್ಲರೆ ಹಣದುಬ್ಬರ 5.59 ಪ್ರತಿಶತದಲ್ಲಿತ್ತು, ಆದರೆ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಈ ಮಟ್ಟದಲ್ಲಿ ಸ್ವಲ್ಪ ಇಳಿಕೆಯಾಗಿತ್ತು.

ದವಸಗಳು ಮತ್ತು ಉತ್ಪನ್ನಗಳು, ಮೊಟ್ಟೆ, ಹಾಲು ಮತ್ತು ಉತ್ಪನ್ನಗಳು, ಮಸಾಲೆಗಳು ಮತ್ತು ಸಿದ್ಧ ಆಹಾರಗಳು, ಕುರುಕಲು ತಿಂಡಿಗಳು ಮತ್ತು ಸಿಹಿ ತಿನಿಸುಗಳು ಡಿಸೆಂಬರ್‌ನಲ್ಲಿ ತೀವ್ರವಾದ ಬೆಲೆ ಏರಿಕೆ ಕಂಡರೆ, ತರಕಾರಿ, ಹಣ್ಣುಗಳು ಮತ್ತು ಎಣ್ಣೆಗಳ ಬೆಲೆಗಳಲ್ಲಿ ಮಂದಗತಿಯ ಏರಿಕೆ ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...