alex Certify ಶೂನ್ಯಕ್ಕೆ ಔಟಾಗಿಲ್ಲ, ಮೋಸವಾಗಿದೆ ಎಂದ ಬಾಂಗ್ಲಾ ನಾಯಕ: ಪಾಕ್​ ಅನ್ನು ಟ್ರೋಲ್​ ಮಾಡುತ್ತಿರುವ ಭಾರತೀಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೂನ್ಯಕ್ಕೆ ಔಟಾಗಿಲ್ಲ, ಮೋಸವಾಗಿದೆ ಎಂದ ಬಾಂಗ್ಲಾ ನಾಯಕ: ಪಾಕ್​ ಅನ್ನು ಟ್ರೋಲ್​ ಮಾಡುತ್ತಿರುವ ಭಾರತೀಯರು

ಮೆಲ್ಬೋರ್ನ್​: ಭಾನುವಾರ ನಡೆದ ಟಿ 20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವನ್ನು ಐದು ವಿಕೆಟ್ ಗಳಿಂದ ಮಣಿಸಿದ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಿತು. ಸೂಪರ್ 12 ರ ಹಂತದಲ್ಲಿ ಭಾರತ ಮತ್ತು ಜಿಂಬಾಬ್ವೆ ನಂತರ ಸೋತ ನಂತರ ಪಾಕಿಸ್ತಾನ ಸೆಮಿಫೈನಲ್ ಗೆ ತಲುಪುದು ತ್ರಾಸದಾಯಕವಾಗಿತ್ತು. ಆದರೆ, ಇದೀಗ ಬಾಂಗ್ಲಾದೇಶ ವಿರುದ್ಧ ಗೆಲ್ಲುವ ಮೂಲಕ ವಿಶ್ವಕಪ್ ಗೆಲ್ಲುವ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.

ಆದರೆ ಈ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತ ಟ್ರೋಲ್​ ಮಾಡಿದೆ. ಇದಕ್ಕೆ ಕಾರಣ ಪಂದ್ಯದಲ್ಲಿ ಒಂದು ವಿವಾದಾತ್ಮಕ ಘಟನೆ ನಡೆದಿದೆ ಎನ್ನುವುದು. ಅದೇನೆಂದರೆ, ಪಾಕಿಸ್ತಾನದ ವಿರುದ್ಧ ಶೂನ್ಯ ಸಂಪಾದನೆ ಮಾಡಿದರು ಎನ್ನುವ ಕಾರಣಕ್ಕೆ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರನ್ನು ಥರ್ಡ್ ಅಂಪೈರ್ ಹಿಂದಿರುವಂತೆ ಹೇಳಿದಾಗ ನಾಯಕ ದಿಗ್ಭ್ರಮೆಗೊಂಡರು. ಬಾಂಗ್ಲಾದೇಶ ಇನಿಂಗ್ಸ್‌ನ 11ನೇ ಓವರ್‌ನಲ್ಲಿ ಸೌಮ್ಯ ಸರ್ಕಾರ್ ನಿರ್ಗಮನದ ನಂತರ ಶಕೀಬ್ ಮಧ್ಯದಲ್ಲಿ ನಿರ್ಗಮಿಸಿದಾಗ ಈ ವಿವಾದಾತ್ಮಕ ಘಟನೆ ಸಂಭವಿಸಿದೆ.

ತಮ್ಮನ್ನು ಈ ರೀತಿ ಮಾಡಿರುವುದು ಸರಿಯಲ್ಲ ಎಂದು ಅವರು ಹೇಳಿದರು. ಶಾದಾಬ್ ಖಾನ್ ಅವರ ಓವರ್‌ನ ಐದನೇ ಎಸೆತವನ್ನು ಎದುರಿಸಿದ್ದ ಶಕೀಬ್​ ಅವರು ಚೆಂಡನ್ನು ಸಂಪೂರ್ಣವಾಗಿ ತಪ್ಪಿಸಿಕೊಂಡಿದ್ದರು ಮತ್ತು ಅವರ ಬೂಟಿಗೆ ಅದು ತಗುಲಿತ್ತು. ಈ ಹಿನ್ನೆಲೆಯಲ್ಲಿ ತಾವು ಔಟ್​ ಅಲ್ಲ ಎಂದು ಹೇಳಿದರೂ ತಮ್ಮನ್ನು ಔಟ್​ ಮಾಡಲಾಯಿತು ಎಂದು ಅವರು ಆರೋಪಿಸಿದ್ದಾರೆ. ಇನ್ನೊಮ್ಮೆ ಈ ಬಗ್ಗೆ ರೀ ಲುಕ್​ ಮಾಡಿ ಎಂದರೂ ಅದನ್ನು ಪರಿಗಣಿಸಲಿಲ್ಲ ಎಂದು ಅವರು ಹೇಳಿದ್ದಾರೆ.

ಇದರಿಂದ ಭಾರತದ ಕ್ರಿಕೆಟಿಗರು ಪಾಕಿಸ್ತಾನವನ್ನು ಟ್ರೋಲ್​ ಮಾಡಿದ್ದಾರೆ. ಏಕೆಂದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಿದ್ದ ಪಂದ್ಯದಲ್ಲಿ ಭಾರತಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪಂದ್ಯವನ್ನು ಬೇಗನೆ ಶುರು ಮಾಡಲಾಗಿತ್ತು ಎಂದು ಪಾಕಿಸ್ತಾನಿಗಳು ಟ್ರೋಲ್​ ಮಾಡುತ್ತಿದ್ದರು. ಇದೀಗ ಪಾಕಿಸ್ತಾನಕ್ಕೆ ಅನುವು ಮಾಡಿಕೊಡಲು ಔಟಾಗದಿದ್ದರೂ ಈ ರೀತಿ ಮಾಡಲಾಗಿದೆ ಎಂದು ಭಾರತೀಯರು ಟ್ರೋಲ್​ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...