alex Certify ಕೈ ಕಚ್ಚಿದರೂ ಎದುರಾಳಿ ಕುತ್ತಿಗೆ ಬಿಡದ ಕುಸ್ತಿಪಟು ರವಿ ಕುಮಾರ್: ಕಜಕಿಸ್ಥಾನದ ಪೈಲ್ವಾನ್​ ವಿರುದ್ಧ ನೆಟ್ಟಿಗರ ಆಕ್ರೋಶ..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈ ಕಚ್ಚಿದರೂ ಎದುರಾಳಿ ಕುತ್ತಿಗೆ ಬಿಡದ ಕುಸ್ತಿಪಟು ರವಿ ಕುಮಾರ್: ಕಜಕಿಸ್ಥಾನದ ಪೈಲ್ವಾನ್​ ವಿರುದ್ಧ ನೆಟ್ಟಿಗರ ಆಕ್ರೋಶ..​..!

ಟೋಕಿಯೋ ಒಲಿಂಪಿಕ್​​ನಲ್ಲಿ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಈ ಬಾರಿ ಪದಕ ಸಿಗೋದು ಖಚಿತವಾಗಿದೆ. ಫ್ರೀಸ್ಟೈಲ್​ ಕುಸ್ತಿಪಟು ರವಿ ಕುಮಾರ್​ ದಹಿಯಾ ಪುರುಷರ 57 ಕೆಜಿ ವಿಭಾಗದಲ್ಲಿ ಫೈನಲ್​ ಪಂದ್ಯಕ್ಕೆ ಆಯ್ಕೆಯಾಗುವ ಮೂಲಕ ಭಾರತಕ್ಕೆ ಕನಿಷ್ಟ ಬೆಳ್ಳಿ ಪದಕದ ಭರವಸೆ ನೀಡಿದ್ದಾರೆ. ಆದರೆ ಇದೇ ಸಮಯದಲ್ಲಿ ಸೋಶಿಯಲ್​ ಮೀಡಿಯಾದಲ್ಲಿ ರವಿ ಕುಮಾರ್​ಗೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋಗಳು ವೈರಲ್​ ಆಗಿದ್ದು ನೆಟ್ಟಿಗರು ಬೆರಗಾಗಿದ್ದಾರೆ.

ಈ ಫೋಟೋದಲ್ಲಿ ಎದುರಾಳಿ ಆಟಗಾರ ರವಿಯ ತೋಳನ್ನು ಬಲವಾಗಿ ಕಚ್ಚಿದ್ದರೂ ಸಹ ಅವರು ಆಟವನ್ನು ಬಿಟ್ಟುಕೊಡದೇ ಎದುರಾಳಿಯ ಕುತ್ತಿಗೆಯನ್ನು ಲಾಕ್​ ಮಾಡಿದ್ದಾರೆ.

ಕುಸ್ತಿ ಪಂದ್ಯಾವಳಿಯಲ್ಲಿ ಫೈನಲ್​ ಪ್ರವೇಶಿಸಿರುವ ರವಿ ದಹಿಯಾ ಟೋಕಿಯೋ ಒಲಿಂಪಿಕ್​ನ ಕುಸ್ತಿ ವಿಭಾಗದಲ್ಲಿ ಪದಕವನ್ನು ಖಚಿತ ಪಡಿಸಿರೋದು ಮಾತ್ರವಲ್ಲದೇ ಚಿನ್ನದ ಪದಕದ ಆಸೆ ಮೂಡುವಂತೆ ಮಾಡಿದ್ದಾರೆ.

ಭಾರತೀಯ ಮಹಿಳಾ ಹಾಕಿ ತಂಡದ ಆಟಗಾರ್ತಿಗೆ ಜಾತಿ ನಿಂದನೆ ಮಾಡಿದ ದುಷ್ಕರ್ಮಿಗಳು….!

ಆದರೆ ಈ ಸೆಮಿಫೈನಲ್​​ ಪಂದ್ಯದಲ್ಲಿ ಎದುರಾಳಿ ಕುಸ್ತಿಪಟುವಿನ ಕ್ರೀಡಾ ಸ್ಪೂರ್ತಿ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 23 ವರ್ಷದ ದಹಿಯಾ ಕಜಕಿಸ್ಥಾನದ ನುರಿಸ್ಲಾಮ್​​ ಸನಾಯೇವ್​​ ವಿರುದ್ಧ 7-9 ಅಂತರದಲ್ಲಿ ಜಯ ಸಾಧಿಸಿದ್ದರು. ಇದೇ ಸೆಮಿಫೈನಲ್​ ಪಂದ್ಯದಲ್ಲಿ ನುರಿಸ್ಲಾಮ್​ ರವಿ ಕೈಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಈ ರೀತಿ ಕೈಯನ್ನು ಕಚ್ಚಿದ್ದಾರೆ.

ರೆಸ್ಟೋರೆಂಟ್‌ನ ವಾಶ್‌ ರೂಂ ನಲ್ಲಿ 45 ನಿಮಿಷ ಕಳೆದ ಪತಿಗೆ ಪತ್ನಿಯಿಂದ ಶಾಕ್

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​​​ ಈ ಸಂಬಂಧ ಟ್ವೀಟ್​ ಮಾಡುವ ಮೂಲಕ ರವಿ ದಹಿಯಾರ ಸಾಧನೆಯನ್ನು ಕೊಂಡಿದ್ದಾರೆ. ಇದು ಸೂಕ್ತವಾದ ಆಟದ ವಿಧಾನವಲ್ಲ. ಆದರೂ ರವಿ ದಹಿಯಾರ ಉತ್ಸಾಹವ​ನ್ನು ಕಡಿಮೆ ಮಾಡಲು ಎದುರಾಳಿ ಬಳಿ ಸಾಧ್ಯವಾಗಲಿಲ್ಲ. ಅವರು ಕೈಯನ್ನು ಕಚ್ಚಿದರು. ಈ ರೀತಿ ಮಾಡೋದಕ್ಕೆ ಕಜಕಿಸ್ಥಾನದ ನುರಿಸ್ಲಾಮ್​ಗೆ ನಾಚಿಕೆ ಎನಿಸಬೇಕು. ರವಿ ದಹಿಯಾರ ಸಾಧನೆ ಅದ್ಭುತ ಎಂದು ಕೊಂಡಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...