ಆಸ್ಟ್ರೇಲಿಯಾ ತಂಡದ ವಿರುದ್ಧ ಸರಣಿಗಾಗಿ ಬ್ರಿಸ್ಬೇನ್ ತಲುಪಿರುವ ಭಾರತೀಯ ಮಹಿಳಾ ಕ್ರಿಕೆಟಿಗರ ತಂಡವು ಅಲ್ಲಿನ ಸರ್ಕಾರದ ಸೂಚನೆಯಂತೆ 14 ದಿನಗಳ ಕಡ್ಡಾಯ ಕ್ವಾರಂಟೈನ್‍ಗೆ ಒಳಪಟ್ಟಿದೆ.
ಕೇವಲ 4 ದಿನಗಳನ್ನು ಮಾತ್ರ ಕಳೆದಿರುವ ಮಹಿಳಾ ಕ್ರಿಕೆಟಿಗರಿಗೆ ಕ್ವಾರಂಟೈನ್ ಕೊಠಡಿ ಬಹಳ ಸಣ್ಣದು ಎನಿಸಿ, ಇನ್ನೂ 10 ದಿನ ಹೇಗೆ ದೂಡುವುದಪ್ಪಾ ಎಂದು ಒದ್ದಾಡುವಂತಾಗಿದೆಯಂತೆ. ಸಣ್ಣ ಜಾಗದಲ್ಲಿಯೇ ಸಾಧ್ಯವಾದಷ್ಟು ವ್ಯಾಯಾಮ, ಆಟದ ವಿಡಿಯೊಗಳನ್ನು ನೋಡಿಕೊಂಡು ತರಬೇತಿ ಮುಂದುವರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊರೊನಾದಿಂದ ಗುಣಮುಖನಾದವನು ಬಳಿಕ ನೇಣಿಗೆ ಶರಣು; ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪೋಷಕರು
ಕಳೆದ ಬಾರಿ ಇಂಗ್ಲೆಂಡ್‍ಗೆ ತೆರಳಿದ್ದಾಗ ಒಂದೇ ವಾರದ ಬಳಿಕ ಅವರನ್ನು ತರಬೇತಿಗಾಗಿ ಫೀಲ್ಡ್ ಗೆ ಇಳಿಸಲಾಗಿತ್ತು. ಆದರೆ ಪರ್ತ್, ಮೆಲ್ಬರ್ನ್, ಬ್ರಿಸ್ಬೇನ್‍ನಲ್ಲಿ ಕಡ್ಡಾಯ ಮತ್ತು ಕಟ್ಟುನಿಟ್ಟಿನ ಕ್ವಾರಂಟೈನ್ ನಿಯಮಗಳು ಜಾರಿಯಲ್ಲಿವೆ.
ಸೆ. 21 ರಿಂದ ಪಂದ್ಯಗಳು ಆರಂಭವಾಗಲಿವೆ. ಮಹಿಳಾ ತಂಡದ ತರಬೇತುದಾರ ರಮೇಶ್ ಪೊವಾರ್ ಅವರು ತಮ್ಮ ಕ್ವಾರಂಟೈನ್ ಕೊಠಡಿಯ ಪುಟ್ಟ ಕಿಟಕಿಯಿಂದ ಫೋಟೊವೊಂದನ್ನು ಕ್ಲಿಕ್ಕಿಸಿ ಟ್ವಿಟರ್‍ನಲ್ಲಿ ಹಂಚಿಕೊಂಡು ಪರಿಸ್ಥಿತಿಯ ಸುಳಿವು ಕೊಟ್ಟಿದ್ದಾರೆ.