alex Certify ಜನ್ಮದಿನದ ಸಂಭ್ರಮದಲ್ಲಿದ್ದ ಭಾರತೀಯ ಮೂಲದ ಯುವತಿ ಗುಂಡಿಗೆ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನ್ಮದಿನದ ಸಂಭ್ರಮದಲ್ಲಿದ್ದ ಭಾರತೀಯ ಮೂಲದ ಯುವತಿ ಗುಂಡಿಗೆ ಬಲಿ

Indian-Origin Techie, Travel Blogger From Himachal Killed Drug-Gang Shootout in Mexico Restaurant

ಹುಟ್ಟಿದ ದಿನದ ಸಂಭ್ರಮಾಚರಣೆ ಆಚರಿಸಲು 25 ವರ್ಷದ ಭಾರತೀಯ ಮೂಲದ ಕ್ಯಾಲಿಫೊರ್ನಿಯಾ ನಿವಾಸಿಯು ಮೆಕ್ಸಿಕೊಗೆ ತೆರಳಿದ್ದರು. ಈ ವೇಳೆ ದುರಾದೃಷ್ಟವಶಾತ್‌ ಎರಡು ಡ್ರಗ್ಸ್‌ ಗ್ಯಾಂಗ್‌ಗಳ ನಡುವೆ ಶೂಟೌಟ್‌ ನಡೆದಿದೆ. ಈ ಗುಂಡಿನ ಚಕಮಕಿಯಲ್ಲಿ ಬುಲೆಟ್‌ ತಗುಲಿ, ಯುವತಿಯು ಅಸುನೀಗಿದ್ದಾಳೆ.

ಮೃತ ಭಾರತೀಯ ಮೂಲದ ಯುವತಿಯ ಹೆಸರು ಅಂಜಲಿ ರೈಯಾಟ್‌ ಎಂದು. ಆಕೆಯ ಜತೆಗೆ ಜರ್ಮನಿ ಮೂಲದ ಪ್ರವಾಸಿ ಮಹಿಳೆ ಕೂಡ ಗುಂಡು ತಾಕಿ ಮೃತಪಟ್ಟಿದ್ದಾರೆ. ನೆದರ್‌ಲ್ಯಾಂಡ್‌ ಮೂಲದ ಇನ್ನೂ ಮೂವರು ಪ್ರವಾಸಿಗರಿಗೂ ಗುಂಡು ತಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಇವರೆಲ್ಲರೂ ತಮಗೆ ಅರಿವಿಲ್ಲದಂತೆಯೇ ಮಾಡಿದ ಒಂದೇ ಒಂದು ತಪ್ಪು ಎಂದರೆ, ರೆಸ್ಟೊರೆಂಟ್‌ವೊಂದರಲ್ಲಿ ನಾಲ್ವರು ಡ್ರಗ್ಸ್‌ ಮಾಫಿಯಾ ಜಾಲದವರು ಕುಳಿತಿದ್ದ ಟೇಬಲ್‌ ಪಕ್ಕದಲ್ಲಿ ಕುಳಿತಿದ್ದು ಮಾತ್ರ.

ಭಯಾನಕ ದೆವ್ವದ ವೇಷ ಧರಿಸಿ ಚೇಷ್ಟೆ ಮಾಡುವಾಗಲೇ ಜೀವ ಕಳೆದುಕೊಂಡ ಯುವತಿ

ಅಂದಹಾಗೆ, ಭಾರತೀಯ ಮೂಲದ ಯುವತಿ ಅಂಜಲಿಯ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಆಕೆಯು ಹಿಮಾಚಲ ಪ್ರದೇಶ ಮೂಲದ ಟ್ರಾವೆಲ್‌ ಬ್ಲಾಗರ್‌ ಎಂದು ದಾಖಲಾಗಿದೆ. ಆದರೆ ಕ್ಯಾಲಿಫೊರ್ನಿಯಾದ ಸ್ಯಾನ್‌ ಜೋಸ್‌ನಲ್ಲಿ ವಾಸವಿದ್ದರು. ಬಹುರಾಷ್ಟ್ರೀಯ ಕಂಪನಿ ’ಲಿಂಕ್ಡ್‌ಇನ್‌’ ನಲ್ಲಿ ಅಂಜಲಿಯು ಹಿರಿಯ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅದಕ್ಕೂ ಮುನ್ನ ಅವರು ಯಾಹೂ ಕಂಪನಿಯಲ್ಲಿದ್ದರು ಎಂದು ತಿಳಿದುಬಂದಿದೆ.

ICSE 10, 12 ನೇ ತರಗತಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ, ಮೊದಲ ಅವಧಿಯ ಬೋರ್ಡ್ ಪರೀಕ್ಷೆ ಆಫ್ಲೈನ್

ಶೂಟೌಟ್‌ ನಡೆದಿರುವುದು ತಲುಮ್‌ ನಗರದ ಲಾ ಮಾಲ್‌ಕ್ಯುರಿರಾ ರೆಸ್ಟೊರೆಂಟ್‌ನ ಟೆರ್ರೇಸ್‌ನಲ್ಲಿ. ಬುಧವಾರ ರಾತ್ರಿ 10.30ರ ಸುಮಾರಿಗೆ ಎರಡು ಕ್ರಿಮಿನಲ್‌ ಗ್ಯಾಂಗ್‌ಗಳು ಮುಖಾಮುಖಿಯಾದಾಗ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದೆಡೆ, ಅಂಜಲಿಯ ಸೋದರ ಆಶಿಶ್‌ ಅವರು ಭಾರತಕ್ಕೆ ಆಕೆಯ ಶವವನ್ನು ಕಳುಹಿಸಿಕೊಡುವಂತೆ ತಲುಮ್‌ ನಗರದ ಮೇಯರ್‌ ಅವರಿಗೆ ಮನವಿ ಮಾಡಿದ್ದಾರೆ. ಅಂತ್ಯ ಸಂಸ್ಕಾರಕ್ಕಾಗಿ ಆದಷ್ಟು ಬೇಗನೇ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿಕೊಡುವಂತೆ ಮಾಧ್ಯಮಗಳ ಮೂಲಕ ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...