alex Certify 19 ರಾಷ್ಟ್ರಗಳ 31 ಪ್ರತಿನಿಧಿಗಳಿಗೆ ಇಸ್ರೋದಿಂದ ನ್ಯಾನೋ ಸ್ಯಾಟಲೈಟ್ ಅಸೆಂಬ್ಲಿ ಕೋರ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

19 ರಾಷ್ಟ್ರಗಳ 31 ಪ್ರತಿನಿಧಿಗಳಿಗೆ ಇಸ್ರೋದಿಂದ ನ್ಯಾನೋ ಸ್ಯಾಟಲೈಟ್ ಅಸೆಂಬ್ಲಿ ಕೋರ್ಸ್‌

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 19 ರಾಷ್ಟ್ರಗಳ 31 ಪ್ರತಿನಿಧಿಗಳಿಗೆ ನ್ಯಾನೋ ಸ್ಯಾಟಲೈಟ್ ಅಸೆಂಬ್ಲಿ ಕೋರ್ಸ್‌ಗಳು ಮತ್ತು ಸಂಬಂಧಿತ ತರಬೇತಿಯನ್ನು ನೀಡಿದೆ. ಭಾರತದ ಉಪಗ್ರಹಗಳನ್ನು ವಿನ್ಯಾಸಗೊಳಿಸುವ ಮತ್ತು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಹೊಂದಿರುವ ಇಸ್ರೋದ ಯುಆರ್ ರಾವ್ ಉಪಗ್ರಹ ಕೇಂದ್ರವು ಈ ತರಬೇತಿ ನೀಡಿದೆ.

ಎರಡು ತಿಂಗಳ ಅವಧಿಯ ತರಬೇತಿಯು ಸಾಮಾನ್ಯ ಉಪಗ್ರಹ ತಂತ್ರಜ್ಞಾನ, ನ್ಯಾನೊ ಸ್ಯಾಟಲೈಟ್ ವಿನ್ಯಾಸ ಮತ್ತು ಪರೀಕ್ಷೆಯ ಪಾಠಗಳನ್ನು ಒಳಗೊಂಡಿತ್ತು. ನ್ಯಾನೊಸಾಟಲೈಟ್‌ಗಳನ್ನು ಸಾಮಾನ್ಯವಾಗಿ 10 ಕೆಜಿಗಿಂತ ಕಡಿಮೆ ತೂಕದವು ಎಂದು ಪರಿಗಣಿಸಲಾಗುತ್ತದೆ.

ಇಸ್ರೋನಿಂದ ಯುನಿಸ್ಪೇಸ್ ನ್ಯಾನೊ ಸ್ಯಾಟಲೈಟ್ ಅಸೆಂಬ್ಲಿ ಮತ್ತು ತರಬೇತಿ ಎಂದು ಕರೆಯಲ್ಪಡುವ ಈ ತರಬೇತಿ ಕಾರ್ಯಕ್ರಮವನ್ನು ಯುಆರ್‌ ರಾವ್ ಉಪಗ್ರಹ ಕೇಂದ್ರ, ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ, ಇಸ್ರೋ ಪ್ರಧಾನ ಕಚೇರಿ, ಇಸ್ರೊ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ವಿಜ್ಞಾನಿಗಳು ನಡೆಸಿದರು.

ಇಲ್ಲಿಯವರೆಗೆ, ಮೂರು ಆವೃತ್ತಿಗಳಲ್ಲಿ ತರಬೇತಿ ನೀಡಲಾಗಿದೆ. ಥಿಯರಿ ತರಗತಿಗಳಿಗೆ ಹೆಚ್ಚುವರಿಯಾಗಿ ಭಾಗವಹಿಸುವವರಿಗೆ ನ್ಯಾನೊಸಾಟಲೈಟ್‌ನ ವಿವಿಧ ಉಪವ್ಯವಸ್ಥೆಗಳನ್ನು ಸಂಯೋಜಿಸಲು ಅವಕಾಶವನ್ನು ನೀಡಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...