ಪಂಜಾಬಿ ಗಾಯಕ ಸಿಧು ಮೂಸೆವಾಲಾ ನಿಧನರಾಗಿರಬಹುದು ಆದರೆ ಅವರ ಹಾಡುಗಳು ಇನ್ನೂ ಮಾಸಿಲ್ಲ, ಜೀವಂತವಾಗಿದೆ. ಹತ್ಯೇಗಿಡಾದ ಆ ಗಾಯಕನಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಕ್ಕಿವೆ.
ಈಗ ಭಾರತೀಯ ಸೇನೆಯ ಸಿಬ್ಬಂದಿ ಅವರ ಒಂದು ಹಾಡು, ಬಂಬಿಹಾ ಬೋಲೆಗೆ ಸ್ಟೆಪ್ ಹಾಕುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶೇಷವೇನೆಂದರೆ ಗಡಿಯಾಚೆಗಿನ ಸೈನಿಕರು ಹಾಡಿನ ಟ್ರಾಕ್ ಪ್ಲೇ ಮಾಡಿದ್ದಾರೆ.
ವಿಡಿಯೋವನ್ನು ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಎಚ್ಜಿಎಸ್ ಧಲಿವಾಲ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಪಾಕಿಸ್ತಾನಿ ಸೈನಿಕರು ಮೂಸೆವಾಲಾ ಅವರ ಬಂಬಿಹಾ ಬೋಲೆಯನ್ನು ಸ್ಪೀಕರ್ಗಳಲ್ಲಿ ಹಾಕಿಕೊಂಡಿರುವುದು ಕಂಡುಬಂದಿದೆ. ಇತ್ತ ಭಾರತೀಯ ಸೇನೆಯ ಸಿಬ್ಬಂದಿ ಪೆಪ್ಪಿ ಹಾಡನ್ನು ಆನಂದಿಸಿ ಮತ್ತು ಅದಕ್ಕೆ ಡ್ಯಾನ್ಸ್ ಮಾಡಿದ್ದಾರೆ. ಗಡಿಯ ಔಟ್ ಪೋಸ್ಟ್ನಲ್ಲಿದ್ದ ಸಿಬ್ಬಂದಿಯ ಮೊಬೈಲ್‌ನಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ.
ಸಿಧುವಿನ ಹಾಡುಗಳು ಗಡಿಯುದ್ದಕ್ಕೂ ಪ್ಲೇ ಆಗುತ್ತಿವೆ ! ವಿಭಜನೆಯನ್ನು ಸೇತುವೆ ಮಾಡುತ್ತಿದೆ” ಎಂದು ಪೋಸ್ಟ್ ಅನ್ನು ಹಂಚಿಕೊಳ್ಳುವಾಗ ಧಲಿವಾಲ್ ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗುತ್ತಿದ್ದಂತೆ 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ನೆಟ್ಟಿಗರು ಕಾಮೆಂಟ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ.
“ಇದು ತುಂಬಾ ಭಾವನಾತ್ಮಕವಾಗಿದೆ. ಗಡಿಯಾಚೆಗಿನ ಜನರು ಸಹ ಸಿಧು ನಷ್ಟದ ನೋವನ್ನು ಅನುಭವಿಸಿದರು. ಆ ಗಾಯಕ ಈಗ ಶಾಂತಿಯಿಂದಿರಲಿ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.