alex Certify ಭಾರತ – ಪಾಕ್​ ವಿಭಜನೆಯಲ್ಲಿ ಬೇರ್ಪಟ್ಟ ಅಣ್ಣ – ತಂಗಿ 75 ವರ್ಷಗಳ ಬಳಿಕ ಪುನರ್​ ಸಮಾಗಮ; ಕಣ್ಣಂಚನ್ನು ತೇವಗೊಳಿಸುತ್ತೆ ಭಾವುಕ ಕ್ಷಣದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ – ಪಾಕ್​ ವಿಭಜನೆಯಲ್ಲಿ ಬೇರ್ಪಟ್ಟ ಅಣ್ಣ – ತಂಗಿ 75 ವರ್ಷಗಳ ಬಳಿಕ ಪುನರ್​ ಸಮಾಗಮ; ಕಣ್ಣಂಚನ್ನು ತೇವಗೊಳಿಸುತ್ತೆ ಭಾವುಕ ಕ್ಷಣದ ವಿಡಿಯೋ

 

ಭಾರತ ಮತ್ತು ಪಾಕಿಸ್ತಾನ ಬೇರ್ಪಟ್ಟ ಸಮಯದಲ್ಲಿ ಬೇರ್ಪಟ್ಟ ಒಂದೇ ಕುಟುಂಬದ ಮಕ್ಕಳು ಬರೋಬ್ಬರಿ 75 ವರ್ಷಗಳ ಬಳಿಕ ಒಂದಾಗಿದ್ದಾರೆ.

ಕರ್ತಾರ್​ಪುರದ ಗುರುದ್ವಾರ ದರ್ಬಾರ್​ ಸಾಹಿಬ್​ನಲ್ಲಿ ಪಾಕಿಸ್ತಾನದ ತನ್ನ ಮುಸ್ಲಿಂ ಸಹೋದರಿಯನ್ನು ಭೇಟಿಯಾದ ಜಲಂಧರ್​ ಮೂಲದ ಸಿಖ್​ ವ್ಯಕ್ತಿ ಅಮರ್ಜಿತ್ ಸಿಂಗ್​ ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ.

ವಿಭಜನೆಯ ಸಮಯದಲ್ಲಿ ಅಮರ್ಜಿತ್​ ಅವರ ಮುಸ್ಲಿಂ ಪೋಷಕರು ಪಾಕಿಸ್ತಾನಕ್ಕೆ ವಲಸೆ ಹೋದಾಗ ತಮ್ಮ ಸಹೋದರಿಯೊಂದಿಗೆ ಮಗನನ್ನು ಭಾರತದಲ್ಲಿ ಬಿಟ್ಟುಹೋಗಿದ್ದರು.

ಬುಧವಾರ ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಕರ್ತಾರ್​ಪುರದ ಗುರುದ್ವಾರ ದರ್ಬಾರ್​ ಸಾಹಿಬ್​ನಲ್ಲಿ ಗಾಲಿಕುರ್ಚಿಯಲ್ಲಿದ್ದ ಅಮರ್ಜಿತ್​ ಸಿಂಗ್​ ತಮ್ಮ ಸಹೋದರಿ ಕುಲ್ಸೂಮ್​ ಅಖ್ತರ್​ ಅವರೊಂದಿಗೆ ಭಾವನಾತ್ಮಕವಾಗಿ ಭೇಟಿಯಾದಾಗ ಅಲ್ಲಿದ್ದ ಎಲ್ಲರ ಕಣ್ಣುಗಳು ತೇವವಾದವು.

ಸಿಂಗ್​ ತನ್ನ ಸಹೋದರಿಯನ್ನು ಭೇಟಿಯಾಗಲು ವೀಸಾದೊಂದಿಗೆ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಬಂದಿದ್ದರು. 65ರ ಹರೆಯದ ಕುಲ್ಸೂಮ್​ಗೆ ತನ್ನ ಅಣ್ಣನನ್ನು ನೋಡಿದ ನಂತರ ತನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅಳುತ್ತಲೇ ಇದ್ದರು. ಆಕೆ ತನ್ನ ಸಹೋದರನನ್ನು ಭೇಟಿಯಾಗಲು ತನ್ನ ಮಗ ಶಹಜಾದ್​ ಅಹ್ಮದ್​ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಫೈಸಲಾಬಾದ್​ನ ತನ್ನ ತವರುಮನೆಯಿಂದ ಪ್ರಯಾಣ ಬೆಳೆಸಿದ್ದರು.

1947ರಲ್ಲಿ ಆಕೆಯ ಪೋಷಕರು ಜಲಂಧರ್​ನಿಂದ ಪಾಕಿಸ್ತಾನಕ್ಕೆ ವಲಸೆ ಬಂದಿದ್ದು, ಕುಲ್ಸೂಮ್​ ಪಾಕಿಸ್ತಾನದಲ್ಲಿ ಜನಿಸಿದರು. ಕಳೆದುಹೋದ ಸಹೋದರ ಮತ್ತು ಸಹೋದರಿಯ ಬಗ್ಗೆ ತಾಯಿಯ ಬಳಿ ಕೇಳುತ್ತಿದ್ದರು. ಕಾಣೆಯಾದ ಮಕ್ಕಳನ್ನು ನೆನಪಿಸಿಕೊಂಡಾಗಲೆಲ್ಲ ತಾಯಿ ಅಳುತ್ತಿದ್ದರು ಎಂದು ಹೇಳಿದ್ದಾರೆ.

ಕೆಲವು ವರ್ಷಗಳ ಹಿಂದೆ, ಆಕೆಯ ತಂದೆ ಸರ್ದಾರ್​ ದಾರಾ ಸಿಂಗ್​ ಸ್ನೇಹಿತ ಭಾರತದಿಂದ ಪಾಕಿಸ್ತಾನಕ್ಕೆ ಬಂದು ಆಕೆಯನ್ನು ಭೇಟಿಯಾದರು. ಈ ವೇಳೆ ಆಕೆಯ ತಾಯಿ ತನ್ನ ಮಗ – ಮಗಳ ಬಗ್ಗೆ ಹೇಳಿದ್ದರು. ಅವರ ಹಳ್ಳಿಯ ಹೆಸರು ಮತ್ತು ಅವರ ಮನೆಯ ಸ್ಥಳವನ್ನು ಸಹ ಅವರಿಗೆ ತಿಳಿಸಿದಳು.

ಸರ್ದಾರ್​ ದಾರಾ ಸಿಂಗ್​ ನಂತರ ಪಡವಾನ್​ ಗ್ರಾಮದಲ್ಲಿರುವ ಆಕೆಯ ಮನೆಗೆ ಭೇಟಿ ನೀಡಿ ಮಗ ಜೀವಂತವಾಗಿದ್ದಾನೆ. ಆದರೆ ಮಗಳು ಮೃತಪಟ್ಟಿದ್ದಾಳೆಂದು ಮಾಹಿತಿ ನೀಡಿದ್ದರು.

1947ರಲ್ಲಿ ಸಿಖ್​ ಕುಟುಂಬದಿಂದ ದತ್ತು ಪಡೆದ ಆಕೆಯ ಮಗನಿಗೆ ಅರ್ಮಜಿತ್​ ಸಿಂಗ್​ ಎಂದು ಹೆಸರಿಡಲಾಗಿತ್ತು. ಸಹೋದರನ ಮಾಹಿತಿಯನ್ನು ಪಡೆದ ನಂತರ, ಕುಲ್ಸೂಮ್​ ಸಿಂಗ್​ ಅವರೊಂದಿಗೆ ವಾಟ್ಸಾಪ್​ನಲ್ಲಿ ಸಂಪರ್ಕ ಹೊಂದಿದ್ದು, ನಂತರ ಭೇಟಿಯಾಗಲು ನಿರ್ಧರಿಸಿದ್ದರು.

ತಮ್ಮ ನಿಜವಾದ ಪೋಷಕರು ಪಾಕಿಸ್ತಾನದಲ್ಲಿದ್ದಾರೆ ಎಂದು ತಿಳಿದಾಗ ತನಗೆ ಆಘಾತವಾಗಿದೆ ಎಂದು ಸಿಂಗ್​ ಹೇಳಿದರು. ಆದರೆ, ತನ್ನ ಕುಟುಂಬದ ಜೊತೆಗೆ ಅನೇಕ ಕುಟುಂಬಗಳು ಬೇರ್ಪಟ್ಟಿವೆ ಎಂದು ಅರಿತು ಸಂತೈಸಿಕೊಂಡಿದ್ದರಂತೆ.

ಕರ್ತಾರ್​ಪುರ ಕಾರಿಡಾರ್​ ಕುಟುಂಬವನ್ನು ಮತ್ತೆ ಒಂದುಗೂಡಿಸುವುದು ಇದು ಎರಡನೇ ಪ್ರಕರಣ. ಮೇ ತಿಂಗಳಲ್ಲಿ, ಮುಸ್ಲಿಂ ದಂಪತಿಗಳಿಂದ ದತ್ತು ಪಡೆದು ಬೆಳೆದ ಸಿಖ್​ ಕುಟುಂಬದಲ್ಲಿ ಜನಿಸಿದ ಮಹಿಳೆಯೊಬ್ಬರು ಕರ್ತಾರ್​ಪುರದಲ್ಲಿ ಭಾರತದ ಸಹೋದರರನ್ನು ಭೇಟಿಯಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...