ಕೊರೊನಾ ವೈರಸ್ನ್ನು ನಾಶ ಮಾಡಬಲ್ಲ ಡ್ರಗ್ ಹಾಗೂ ಡ್ರಗ್ಗಳ ಮಿಶ್ರಣವನ್ನ ಭಾರತೀಯ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ಡ್ರಗ್ಗಳ ಮಿಶ್ರಣವು ದೇಹದಲ್ಲಿನ ಪ್ರಮುಖ ಪ್ರೋಟಿನ್ಗಳನ್ನ ಗುರಿಯಾಗಿಸೋದು ಮಾತ್ರವಲ್ಲದೇ ಕೊರೊನಾ ವಿರುದ್ಧದ ಚಿಕಿತ್ಸೆಯಲ್ಲೂ ಪರಿಣಾಮಕಾರಿ ಪಾತ್ರ ವಹಿಸಲಿದೆ.
ಡ್ರಗ್ ಬ್ಯಾಂಕ್ ಡೇಟಾಗಳನ್ನ ಬಳಸಿಕೊಂಡು ಕೊರೊನಾ ಮೇಲೆ ಅಟ್ಯಾಕ್ ಮಾಡಲ್ಲ ಕೆಮಿಕಲ್ ಮಿಶ್ರಣಕ್ಕೆ ಎಫ್ಡಿಎ ಅನುಮತಿ ನೀಡಿದೆ ಅಂತಾ ವರದಿಯಾಗಿದೆ.
ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಹಾಗೂ ಸ್ವೀಡನ್ನ ಕೆಟಿಹೆಚ್ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಕೊರೊನಾ ಚಿಕಿತ್ಸೆಗೆ ಅರ್ಹವಾದ ಪ್ರತ್ಯೇಕ ಡ್ರಗ್ಗಳು ಹಾಗೂ ಡ್ರಗ್ ಕಾಕ್ಟೇಲ್ ಪಟ್ಟಿಯನ್ನ ರೆಡಿ ಮಾಡಿದ್ದಾರೆ.