alex Certify ಎರಡೂವರೆ ಸಾವಿರ ವರ್ಷಗಳಷ್ಟು ಹಳೆಯ ಸಂಸ್ಕೃತ ಒಗಟು ಬಿಡಿಸಿದ ಭಾರತೀಯ ವಿದ್ಯಾರ್ಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡೂವರೆ ಸಾವಿರ ವರ್ಷಗಳಷ್ಟು ಹಳೆಯ ಸಂಸ್ಕೃತ ಒಗಟು ಬಿಡಿಸಿದ ಭಾರತೀಯ ವಿದ್ಯಾರ್ಥಿ

ನವದೆಹಲಿ: ಕ್ರಿಸ್ತಪೂರ್ವ 5ನೇ ಶತಮಾನದ ವಿದ್ವಾಂಸ ಮತ್ತು ಭಾಷಾಶಾಸ್ತ್ರಜ್ಞ ಪಾಣಿನಿ ಅವರು ಬರೆದ ಪ್ರಾಚೀನ ಸಂಸ್ಕೃತ ಪಠ್ಯಗಳಲ್ಲಿನ 2,500 ವರ್ಷಗಳ ಹಳೆಯ ಒಗಟೊಂದನ್ನು ಇಂಗ್ಲೆಂಡ್​ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಯೊಬ್ಬರು ಬಿಡಿಸಿದ್ದಾರೆ.

ಇವರು ರಾಜ್‌ಪೋಪಟ್ ಕೇಂಬ್ರಿಡ್ಜ್‌ನ ಸೇಂಟ್ ಜಾನ್ಸ್ ಕಾಲೇಜಿನಲ್ಲಿ ಏಷ್ಯನ್ ಮತ್ತು ಮಧ್ಯಪ್ರಾಚ್ಯ ವಿಭಾಗದಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದಾರೆ. ಸಂಸ್ಕೃತ ವ್ಯಾಕರಣಕ್ಕೆ ಸಂಬಂಧಿಸಿದ ವಿಶ್ವದ ಅತಿದೊಡ್ಡ ರಹಸ್ಯ ಇದು ಎನ್ನಲಾಗಿತ್ತು. ಈ ಒಗಟು ಐದನೇ ಶತಮಾನದ ವಿದ್ವಾಂಸರನ್ನು ಗೊಂದಲಗೊಳಿಸಿತ್ತು. ಈ ಮೂಲಕ 27 ವರ್ಷದ ವಿದ್ಯಾರ್ಥಿ ರಿಷಿ ಅತುಲ್ ರಾಜ್‌ಪೋಪಟ್ ಹೊಸ ದಾಖಲೆ ನಿರ್ಮಿಸಿದ್ದಾರೆ.

ಒಂಬತ್ತು ತಿಂಗಳಿಂದ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದರೂ, ನಾನು ಬಿಟ್ಟುಕೊಡಲು ಬಹುತೇಕ ಸಿದ್ಧನಾಗಿದ್ದೆ, ನನಗೆ ಎಲ್ಲಿಯೂ ಪರಿಹಾರ ಸಿಗಲಿಲ್ಲ. ಹಾಗಾಗಿ ನಾನು ಒಂದು ತಿಂಗಳ ಕಾಲ ಪುಸ್ತಕಗಳನ್ನು ಮುಚ್ಚಿ ಬೇಸಿಗೆ, ಈಜು, ಸೈಕ್ಲಿಂಗ್, ಅಡುಗೆ, ಪ್ರಾರ್ಥನೆ ಮತ್ತು ಧ್ಯಾನವನ್ನು ಆನಂದಿಸಿದೆ. ನಂತರ ಅರ್ಥವಾಗಲು ಪ್ರಾರಂಭಿಸಿತು. ಸಮಸ್ಯೆಯನ್ನು ಪರಿಹರಿಸಲು ಇನ್ನೂ ಎರಡು ವರ್ಷಗಳು ಬೇಕಾಯಿತು ಎಂದು ರಿಷಿ ಹೇಳಿದ್ದಾರೆ.

ಪ್ರಮುಖ ಸಂಸ್ಕೃತ ವಿದ್ವಾಂಸರು ರಿಷಿ ಅವರ ಸಂಶೋಧನೆಯನ್ನು ಕ್ರಾಂತಿಕಾರಕ ಎಂದು ಬಣ್ಣಿಸಿದ್ದಾರೆ. ‘ನನ್ನ ಪಾಲಿಗೆ ಅದು ಅವಿಸ್ಮರಣೀಯ ಕ್ಷಣವಾಗಿತ್ತು’ ಎಂದು ರಿಷಿ ಪ್ರತಿಕ್ರಿಯಿಸಿದ್ದಾರೆ. ಪ್ರಾಚೀನ ಭಾಷೆಯಾದ ಸಂಸ್ಕೃತ ಸದ್ಯ ಭಾರತದಲ್ಲಿ ಮಾತ್ರ ಬಳಕೆಯಲ್ಲಿದೆ. ಸುಮಾರು 25 ಸಾವಿರ ಜನರು ಬಳಸುತ್ತಿದ್ದಾರೆ ಎನ್ನಲಾಗಿದೆ. ವಿಶ್ವದಾದ್ಯಂತ ಹಲವು ಭಾಷೆ, ಸಂಸ್ಕೃತಿಯ ಮೇಲೆ ಇದರ ಪ್ರಭಾವವಿದೆ.

ಪಾಣಿನಿ ಸಂಸ್ಕೃತ ಪಂಡಿತ. ವ್ಯಾಕರಣಕ್ಕೆ ಮೂಲಾಧಾರವಾದ ಸೂತ್ರಗಳನ್ನು ಕುರಿತ ಇವರ ಗ್ರಂಥ ‘ಅಷ್ಟಾಧ್ಯಾಯಿ’ಯಲ್ಲಿನ ಸಮಸ್ಯೆಗಳಿಗೆ ರಿಷಿ ಈಗ ಪರಿಹಾರ ಹುಡುಕಿದ್ದಾರೆ. ಈಗ ಪಾಣಿನಿ ಸೂತ್ರಗಳನ್ನು ಕೂಡ ಕಂಪ್ಯೂಟರ್‌ನಲ್ಲಿ ಅಳವಡಿಸಬಹುದಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...