alex Certify ರೈಲಿನಲ್ಲಿ ಪ್ರಯಾಣಿಸುವ ‘ಹಿರಿಯ ನಾಗರಿಕ’ ರಿಗೆ ತಿಳಿದಿರಲಿ ಈ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ಪ್ರಯಾಣಿಸುವ ‘ಹಿರಿಯ ನಾಗರಿಕ’ ರಿಗೆ ತಿಳಿದಿರಲಿ ಈ ಮುಖ್ಯ ಮಾಹಿತಿ

ರೈಲಿನಲ್ಲಿ ದೂರ ಪ್ರಯಾಣ ಅಥವಾ ರಾತ್ರಿ ಪ್ರಯಾಣ ಮಾಡುತ್ತೀದ್ದೀರಾ? ಹಾಗಾದರೆ ಹಿರಿಯ ನಾಗರಿಕರಿಗೆ ’ಲೋ ಬರ್ತ್‌’ ರಿಸರ್ವೇಷನ್‌ ಖಾತ್ರಿ ಆಗಬೇಕೇ? ಹೀಗಿದೆ ಮಾರ್ಗ…

ದೂರದ ಊರುಗಳಿಗೆ ಅಥವಾ ರಾತ್ರಿ ವೇಳೆಯ ಪ್ರಯಾಣಕ್ಕೆ ದೇಶದಲ್ಲಿ ಅತ್ಯಂತ ಆರಾಮದಾಯಕ ಪ್ರಯಾಣ ಮಾರ್ಗವೆಂದರೆ ’ ರೈಲು ಏರಿ ಮಲಗಿ ಬಿಡುವುದು’. ಆನ್‌ಲೈನ್‌ ಮೂಲಕ ರೈಲ್ವೆ ಸೀಟು ಕಾಯ್ದಿರಿಸುವುದು ಮತ್ತು ಸರಿಯಾದ ಸಮಯಕ್ಕೆ ರೈಲು ನಿಲ್ದಾಣ ತಲುಪಿಕೊಂಡು ರೈಲನ್ನು ಏರಿದರೆ ಸಾಕು, ಸುಖಕರ ಪ್ರಯಾಣ ನಿಮ್ಮದಾಗಲಿದೆ.

ಈ ಯೋಜನೆಯಲ್ಲಿ ದಿನವೂ 95 ರೂ. ಠೇವಣಿ ಇಟ್ಟರೆ ಸಿಗುತ್ತೆ 14 ಲಕ್ಷ ರೂ.

ಇನ್ನು, ಹಿರಿಯ ನಾಗರಿಕರಿಗಂತೂ ರೈಲು ಪ್ರಯಾಣ ಹೇಳಿ ಮಾಡಿಸಿದಂತೆಯೇ ಸರಿ. ಆದರೆ, ಮಲಗುವ ಸೀಟು ’ಲೋ ಬರ್ತ್‌’ ಸಿಗಬೇಕು. ಮೇಲಿನ ಸೀಟುಗಳನ್ನು ಅವರು ಏರಿಕೊಂಡು ಮಲಗಿದರೂ, ಶೌಚಾಲಯ ಅಥವಾ ಇತರ ಕೆಲಸಗಳಿಗೆ ಆಗಾಗ್ಗೆ ಕೆಳಕ್ಕೆ ಇಳಿಯುವುದು ತ್ರಾಸದಾಯಕ ಎನಿಸಲಿದೆ.

ಹೀಗಿದ್ದಲ್ಲಿ ಹಿರಿಯ ನಾಗರಿಕರಿಗೆ ಖಾತ್ರಿಯಾಗಿ ಲೋ ಬರ್ತ್‌ ಸೀಟು ಪಡೆಯುವ ಉಪಾಯವೊಂದನ್ನು ಐಆರ್‌ಸಿಟಿಸಿ ವ್ಯವಸ್ಥೆ ಅಡಿಯಲ್ಲಿ ಇರುವುದನ್ನು ಟ್ವಿಟರ್‌ ಖಾತೆಯಲ್ಲಿ ಸ್ವತಃ ಐಆರ್‌ಸಿಟಿಸಿ ಅಧಿಕಾರಿಗಳೇ ವಿವರಿಸಿದ್ದಾರೆ. ಜಿತೇಂದ್ರ ಎನ್ನುವ ಟ್ವಿಟರ್‌ ಖಾತೆದಾರರ ಪ್ರಶ್ನೆಗೆ ಉತ್ತರಿಸಲಾಗಿದೆ.

ಅದರಂತೆ, ಹಿರಿಯ ನಾಗರಿಕ ಅಥವಾ ಲೋಬರ್ತ್‌ ಕೋಟಾದಲ್ಲಿನ ಲೋ ಬರ್ತ್‌ ಸೀಟುಗಳು 60 ವರ್ಷ ಮೇಲ್ಪಟ್ಟ ಪುರುಷ ಪ್ರಯಾಣಿಕರಿಗೆ ಮತ್ತು 45 ವರ್ಷ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಮಾತ್ರವೇ ಮೀಸಲಿರಿಸಲು ಅವಕಾಶವಿದೆ.

ಮತ್ತೆ ಮತ್ತೆ ಬಳಸುವ ʼಪ್ಲಾಸ್ಟಿಕ್ʼ ಬಾಟಲ್ ಎಷ್ಟು ಡೇಂಜರಸ್ ಗೊತ್ತಾ…..?

ಅದರಲ್ಲೂ ಇಬ್ಬರು ಪ್ರಯಾಣಿಕರು ಪ್ರಯಾಣಿಸುತ್ತಿರುವ ಬುಕ್ಕಿಂಗ್‌ಗೆ ಈ ವ್ಯವಸ್ಥೆ ಅನುಸರಿಸಲಾಗುತ್ತದೆ.

ಇಬ್ಬರಿಗಿಂತ ಹೆಚ್ಚು ಹಿರಿಯ ನಾಗರಿಕರಿದ್ದರೆ ಅಥವಾ ಒಬ್ಬರು ಹಿರಿಯ ನಾಗರಿಕರ ಜತೆಗೆ ಮತ್ತೊಬ್ಬ ಯುವಕರು ಅಥವಾ ಮಧ್ಯಮ ವಯಸ್ಕರು ಪ್ರಯಾಣಿಸುತ್ತಿದ್ದರೆ ಆಗ ರೈಲ್ವೆ ಟಿಕೆಟ್‌ ಬುಕ್ಕಿಂಗ್‌ ಸಿಸ್ಟಮ್‌ ’ ಲೋ ಬರ್ತ್‌’ ಕೋಟಾ ಅಡಿಯಲ್ಲಿ ಸೀಟು ಮೀಸಲು ಪರಿಗಣಿಸಲ್ಲ ಎಂದು ಐಆರ್‌ಸಿಟಿಸಿ ತಿಳಿಸಲಾಗಿದೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರ ಟ್ವಿಟರ್‌ ಖಾತೆಗೂ ಟ್ಯಾಗ್‌ ಮಾಡಿ ಜಿತೇಂದ್ರ ಅವರು ತಮ್ಮ ಸಮಸ್ಯೆ ಹೇಳಿಕೊಂಡಿರುವುದಕ್ಕೆ ಎಚ್ಚೆತ್ತಿರುವ ಐಆರ್‌ಸಿಟಿಸಿ ಕೂಡಲೇ ವಿವರಣೆ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...