ಪ್ರೀಮಿಯಂ ರೈಲುಗಳಲ್ಲಿ ವಿಮಾನದಲ್ಲಿ ಸಿಗುವಂಥ ಸೇವೆಗಳನ್ನು ಒದಗಿಸಲು ಚಿಂತನೆ ನಡೆಸಿರುವ ಭಾರತೀಯ ರೈಲ್ವೇ, ಪ್ರಯಾಣಿಕರ ಆರೈಕೆಗಾಗಿ ಅಟೆಂಡೆಂಟ್‌ಗಳನ್ನು ಕರೆತರಲು ಮುಂದಾಗಿದೆ.
ವಿಮಾನದಲ್ಲಿರುವ ಗಗನಸಖಿಯರಂತೆ ಈ ಹಳಿಸಖಿಯರನ್ನು ವಂದೇ ಭಾರತ್, ಗತಿಮಾನ್, ತೇಜಸ್ ಎಕ್ಸ್‌ಪ್ರೆಸ್‌ಗಳಲ್ಲಿ ಶೀಘ್ರವೇ ತರುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತೀಯ ರೈಲ್ವೇಯ ಪ್ರೀಮಿಯಂ ರೈಲುಗಳಿಗೆ ಸೀಮಿತವಿರಲಿರುವ ಈ ಸಿಬ್ಬಂದಿಯಲ್ಲಿ ಪುರುಷರು ಹಾಗೂ ಮಹಿಳೆಯರು ಇರಲಿದ್ದಾರೆ. ವಿಮಾನಗಳಲ್ಲಿ ಗಗನಸಖಿಯರು ಪ್ರಯಾಣಿಕರಿಗೆ ಆಹಾರ-ಪೇಯಗಳನ್ನು ತಂದುಕೊಡುವಂತೆ ಇವರೂ ಸಹ ರೈಲು ಪ್ರಯಾಣಿಕರಿಗೆ ಸೇವೆ ನೀಡಲಿದ್ದಾರೆ.
ಹಗಲಿನ ರೈಲುಗಳಲ್ಲಿ ಮಹಿಳೆಯರು ಕೆಲಸ ಮಾಡಿದರೆ, ರಾತ್ರಿ ರೈಲುಗಳಲ್ಲಿ ಪುರುಷರು ಕೆಲಸ ಮಾಡಲಿದ್ದಾರೆ.
ದೇಶದಲ್ಲಿ ಸದ್ಯ 25 ಪ್ರೀಮಿಯಂ ರೈಲುಗಳು ಹಳಿಯ ಮೇಲೆ ಓಡುತ್ತಿವೆ — ಶತಾಬ್ದಿ ಎಕ್ಸ್‌ಪ್ರೆಸ್‌ನ 12, ಒಂದು ಗತಿಮಾನ್, ವಂದೇ ಭಾರತ್‌ನ ಎರಡು, ಒಂದು ತೇಜಸ್ ಎಕ್ಸ್‌ಪ್ರೆಸ್.