alex Certify ಜನವರಿಯೊಳಗೆ ರೈಲ್ವೆ ನಿಲ್ದಾಣಗಳಲ್ಲಿ ಅತ್ಯಾಧುನಿಕ ವ್ಯವಸ್ಥೆಯ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿಯೊಳಗೆ ರೈಲ್ವೆ ನಿಲ್ದಾಣಗಳಲ್ಲಿ ಅತ್ಯಾಧುನಿಕ ವ್ಯವಸ್ಥೆಯ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು

ರೈಲ್ವೇ ಇಲಾಖೆ ದೇಶದ ತನ್ನೆಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಸಿಸಿ ಟಿವಿ ಕಣ್ಗಾವಲು ವ್ಯವಸ್ಥೆಗಳನ್ನು ಮಾಡಲು ಬಯಸಿದ್ದು, ಮೊದಲ ಹಂತವು ಜನವರಿ 2023 ರ ವೇಳೆಗೆ ರ್ಪೂಣಗೊಳ್ಳಲಿದೆ.

ಇದರ ಅನುಷ್ಠಾನವನ್ನು ರೈಲ್​ಟೆಲ್​ ಸಂಸ್ಥೆ ಮಾಡಲಿದೆ. ಮೊದಲ ಹಂತದಲ್ಲಿ 756 ನಿಲ್ದಾಣಗಳನ್ನು ಸಿಸಿ ಟಿವಿ ಕಣ್ಗಾವಲಿಗೆ ತರಲು ಬಯಸಲಾಗಿದೆ. ಎರಡನೇ ಹಂತದಲ್ಲಿ ಉಳಿದವು ಒಳಗೊಳ್ಳಲಿದೆ.

ರೈಲು ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸುವ ಪ್ರಯತ್ನದ ಭಾಗವಾಗಿ ರೈಲ್ವೆ ನಿಲ್ದಾಣಗಳಲ್ಲಿ ಇಂರ್ಟನೆಟ್​ ಪ್ರೋಟೋಕಾಲ್​ ಆಧಾರಿತ ವಿಡಿಯೊ ಕಣ್ಗಾವಲು ವ್ಯವಸ್ಥೆ ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ, ಅಂದರೆ, ಹಾಲ್​ಗಳು, ಕಾಯ್ದಿರಿಸುವಿಕೆ ಕೌಂಟರ್​ಗಳು, ಫ್ಲಾಟ್ ಫಾರ್ಮ್, ವಾಹನ ನಿಲುಗಡೆ ಪ್ರದೇಶಗಳು, ಮುಖ್ಯ ದ್ವಾರ- ನಿರ್ಗಮನ, ಫುಟ್​ ಓವರ್​ ಬ್ರಿಡ್ಜ್​ ಮತ್ತು ಬುಕಿಂಗ್​ ಕಚೇರಿಗಳು ಒಳಗೊಳ್ಳಲಿದೆ.

BREAKING: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ, ಅಪಘಾತದಲ್ಲಿ 8 ಪ್ರಯಾಣಿಕರಿಗೆ ಗಾಯ

ರೈಲ್ವೆ ಆವರಣದಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಿಲ್ದಾಣಗಳ ಸಿಸಿಟಿವಿ ಕ್ಯಾಮೆರಾಗಳು ಮತ್ತು ವಿಡಿಯೊ ಫೀಡ್​ಗಳನ್ನು ಮೂರು ಹಂತಗಳಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ವ್ಯವಸ್ಥೆಯು ಆಟಿರ್ಫಿಶಿಯಲ್​ ಇಂಟೆಲಿಜೆನ್ಸ್​ (ಎಐ) ಸಕ್ರಿಯಗೊಳಿಸಿದ ವಿಡಿಯೊ ಅನಾಲಿಟಿಕ್ಸ್​ ಸಾಫ್ಟ್​ವೇರ್​ ಮತ್ತು ಫೇಶಿಯಲ್​ ರೆಕಗ್ನಿಷನ್​ ಸಾಫ್ಟ್​ವೇರ್​ನೊಂದಿಗೆ ಬರುತ್ತದೆ, ಇದು ಅಪರಾಧಿಗಳು ನಿಲ್ದಾಣದ ಆವರಣಕ್ಕೆ ಪ್ರವೇಶಿಸಿದಾಗ ಎಚ್ಚರಿಕೆಯನ್ನು ನೀಡಲಿದೆ.
ಹೀಗಾಗಿ ಅವರನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ಕ್ಯಾಮೆರಾಗಳು, ಸರ್ವರ್​, ಯುಪಿಎಸ್​ ಮತ್ತು ಸ್ವಿಚ್​ಗಳ ಮೇಲ್ವಿಚಾರಣೆಗಾಗಿ ನೆಟ್​ವರ್ಕ್​ ಮ್ಯಾನೇಜ್​ಮೆಂಟ್​ ಸಿಸ್ಟಮ್​ ಸಹ ಒದಗಿಸಲಾಗಿದೆ, ಇದನ್ನು ಅಧಿಕೃತ ಸಿಬ್ಬಂದಿ ಯಾವುದೇ ವೆಬ್​ ಬ್ರೌಸರ್​ನಿಂದ ವೀಕ್ಷಿಸಬಹುದು.

ರೈಲ್ವೇ ಆವರಣದ ಗರಿಷ್ಠ ವ್ಯಾಪ್ತಿ ಕವರ್​ ಮಾಡಲು ನಾಲ್ಕು ವಿಧದ ಐಪಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗುತ್ತದೆ. ಡೋಮ್​ ಪ್ರಕಾರ, ಬುಲೆಟ್​ ಟೈಪ್​, ಪ್ಯಾನ್​ ಟಿಲ್ಟ್​ ಜೂಮ್​ ಟೈಪ್​ ಮತ್ತು ಅಲ್ಟ್ರಾ ಎಚ್​ಡಿ-4ಕೆ ಬಳಸಲಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kouzlo vody: Jak udělat z akvária skvělou dekoraci Чешский язык: Тест на IQ: найдите 3 стрелки за Co se stane, když kočku zataháte Originální recept