ಮಧ್ಯಮವರ್ಗದವರ ಕೈಗೆಟುಕುವ ಬೆಲೆಯಲ್ಲಿ ಎಸಿ ರೈಲಿನ ಪ್ರಯಾಣದ ಸೌಕರ್ಯ ಒದಗಿಸಲು ಮುಂದಾಗಿರುವ ಭಾರತೀಯ ರೈಲ್ವೇ ಎಸಿ 3 ಟಯರ್‌ನ ಎಕನಾಮಿ ಕ್ಲಾಸ್ ಬೋಗಿಗಳನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇದಕ್ಕೆಂದು ವಿಶೇಷ ಬೋಗಿಗಳನ್ನು ದೇಶದ ಅನೇಕ ಕೋಚ್ ಕಾರ್ಖಾನೆಗಳಲ್ಲಿ ಸಿದ್ಧಪಡಿಸಲಾಗುತ್ತಿದೆ. ಈ ಬೋಗಿಗಳು ಎಸಿ 3 ಟಯರ್‌ನ ಸಾಮಾನ್ಯ ಬೋಗಿಗಳಂತೆಯೇ ಇರಲಿವೆ.
ಬಹುತೇಕ ಪುರುಷರು ಗೂಗಲ್ ನಲ್ಲಿ ಸರ್ಚ್ ಮಾಡ್ತಾರೆ ಈ ವಿಷ್ಯ..!
ಈ ಯೋಜನೆಯಡಿ ಅದಾಗಲೇ 344 ಕೋಚ್‌ಗಳನ್ನು ಇಂಟಿಗ್ರಲ್ ಕೋಚ್ ಕಾರ್ಖಾನೆ ಸಿದ್ಧಪಡಿಸುತ್ತಿದ್ದರೆ, ರೈಲ್ ಕೋಚ್ ಕಾರ್ಖಾನೆ 177 ಹಾಗೂ ಮಾಡರ್ನ್ ಕೋಚ್ ಫ್ಯಾಕ್ಟರಿ 285 ಬೋಗಿಗಳ ನಿರ್ಮಾಣದಲ್ಲಿ ನಿರತವಾಗಿದೆ. ಪ್ರಸಕ್ತ ವಿತ್ತೀಯ ವರ್ಷದ ಅಂತ್ಯಕ್ಕೆ ಒಟ್ಟಾರೆ 806 ಬೋಗಿಗಳು ಸಂಚಾರಕ್ಕೆ ಸಿದ್ಧಪಡಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ಈ ಬೋಗಿಗಳಲ್ಲಿ ಅನೇಕ ಸವಲತ್ತುಗಳು ಇರಲಿದ್ದು, ಓದಲು ಪುಟ್ಟದೊಂದು ದೀಪ, ಎಸಿ ವೆಂಟ್‌ಗಳು, ಯುಎಸ್‌ಬಿ ಪಾಯಿಂಟ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಮೇಲಿನ ಆಸನಗಳಿಗೆ ಏರಲು ಸುಲಭವಾದ ಏಣಿ ಹಾಗೂ ಊಟಕ್ಕೆಂದು ವಿಶೇಷ ಮೇಜುಗಳನ್ನು ಒದಗಿಸಲಾಗುವುದು.