alex Certify ಹೈಸ್ಪೀಡ್​ ರೈಲು ಓಡುವಾಗ ಬೆಳಕಿನ ಆಟ: ಅದ್ಭುತ ದೃಶ್ಯಗಳ ಸೆರೆ ಹಿಡಿದ ರೈಲ್ವೆ ಇಲಾಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈಸ್ಪೀಡ್​ ರೈಲು ಓಡುವಾಗ ಬೆಳಕಿನ ಆಟ: ಅದ್ಭುತ ದೃಶ್ಯಗಳ ಸೆರೆ ಹಿಡಿದ ರೈಲ್ವೆ ಇಲಾಖೆ

ಪ್ರವಾಸಿಗರು ಅದರಲ್ಲಿಯೂ ವಿಶೇಷವಾಗಿ ಪ್ರಕೃತಿಯ ಸೌಂದರ್ಯವನ್ನು ಆನಂದಿಸುವವರು ಮತ್ತು ಅದನ್ನು ಪ್ರಶಂಸಿಸುವವರಿಗೆ ರೈಲು ಪ್ರಯಾಣ ಕೆಲವು ಮಾರ್ಗಗಳಲ್ಲಿ ಅದ್ಭುತ ಅನುಭವಗಳನ್ನು ನೀಡುತ್ತದೆ. ಅದರಲ್ಲಿಯೂ ಭಾರತದಲ್ಲಿನ ಕೆಲವೊಂದು ಭೂಪ್ರದೇಶಗಳು ಮತ್ತು ಆಕರ್ಷಕವಾದ ದೃಶ್ಯಾವಳಿಗಳು ರೈಲಿನಲ್ಲಿ ಪ್ರಯಾಣಿಸುವಾಗ ಮನಸೂರೆಗೊಳಿಸುತ್ತವೆ.

ಅಂಥದ್ದೇ ಒಂದು ಮನಮೋಹಕ ದೃಶ್ಯಗಳನ್ನು ರೈಲ್ವೇ ಸಚಿವಾಲಯ ಶೇರ್​ ಮಾಡಿಕೊಂಡಿದೆ. ಟ್ವಿಟರ್ ಹ್ಯಾಂಡಲ್ ‘ದಿ ಟ್ರೈನ್ ಸ್ಟೋರಿ’ಯಲ್ಲಿ ಕೆಲವು ದೃಶ್ಯಗಳನ್ನು ಹಂಚಿಕೊಳ್ಳಲಾಗಿದ್ದು, ಇದು ಟ್ವಿಟರ್ ಬಳಕೆದಾರರನ್ನು ಮೂಕರನ್ನಾಗಿಸಿದೆ. ಚಲಿಸುತ್ತಿರುವ ರೈಲಿನಿಂದ ಅದ್ಭುತ ಚಿತ್ರಗಳು ಇವಾಗಿವೆ.

“ಎ ಪಿಕ್ಚರ್ಸ್ಕ್ ಬಯೋಗ್ರಫಿ” ಎಂದು ಶೀರ್ಷಿಕೆ ನೀಡಲಾಗಿದ್ದು, ಇದರಲ್ಲಿ ಓಡುತ್ತಿರುವ ರೈಲಿನಲ್ಲಿ ಬೆಳಕಿನ ಮಾಂತ್ರಿಕತೆಯನ್ನು ಸವಿಯಬಹುದಾಗಿದೆ. ಹೈ-ಸ್ಪೀಡ್ ರೈಲು ಹೋಗುತ್ತಿರುವ ಸಂದರ್ಭದಲ್ಲಿ ಅಲ್ಲಿಯೇ ಇರುವ ಬೆಳಕಿನ ಆಟವನ್ನು ಈ ದೃಶ್ಯದಲ್ಲಿ ಅದ್ಭುತವಾಗಿ ಸೆರೆ ಹಿಡಿಯಲಾಗಿದೆ.

ಮೂರು ದಿನಗಳಲ್ಲಿಯೇ ಈ ಅದ್ಭುತ ದೃಶ್ಯವನ್ನು ಸಾವಿರಕ್ಕೂ ಅಧಿಕ ಮಂದಿ ಇಷ್ಟಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ರೀಟ್ವೀಟ್‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...