alex Certify ಮದ್ಯದ ಅಮಲಲ್ಲಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ವಿದ್ಯಾರ್ಥಿಗೆ ಜೈಲು ಶಿಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದ ಅಮಲಲ್ಲಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ವಿದ್ಯಾರ್ಥಿಗೆ ಜೈಲು ಶಿಕ್ಷೆ

ಬ್ರಿಟನ್‌ ನಲ್ಲಿ ಮದ್ಯ ಸೇವಿಸಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಭಾರತೀಯ ಮೂಲದ ವಿದ್ಯಾರ್ಥಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಯುನೈಟೆಡ್ ಕಿಂಗ್‌ ಡಂನ ಕಾರ್ಡಿಫ್‌ ನಲ್ಲಿ ಘಟನೆ ನಡೆದಿದೆ. ಕುಡಿದು ಅರೆಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿ ನಂತರ ಜೈಲಿನಲ್ಲಿರಿಸಲಾಯಿತು. ಕಳೆದ ವರ್ಷ ಜೂನ್‌ ನಲ್ಲಿ 20 ವರ್ಷದ ಪ್ರೀತ್ ವಿಕಲ್ ಎಂಬಾತ ಕುಡಿದ ಅಮಲಿನಲ್ಲಿದ್ದ ಮಹಿಳೆಯನ್ನು ಕಾರ್ಡಿಫ್ ನಗರದ ತನ್ನ ಫ್ಲಾಟ್‌ ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮತ್ತು ಮಹಿಳೆ ಪ್ರತ್ಯೇಕವಾಗಿ ತಮ್ಮ ತಮ್ಮ ಗುಂಪುಗಳೊಂದಿಗೆ ನಗರದಲ್ಲಿ ರಾತ್ರಿ ವಿಹಾರಕ್ಕೆ ಹೋಗಿದ್ದರು. ಮಹಿಳೆ ಅತಿಯಾಗಿ ಕುಡಿದಿದ್ದರು. ಅವಳು ಕ್ಲಬ್‌ನಿಂದ ಹೊರಗೆ ಬಂದಾಗ ಪ್ರೀತ್ ವಿಕಲ್‌ ಎದುರಾಗಿದ್ದಾನೆ. ನಂತರ ಆಕೆಯನ್ನು ತನ್ನ ಫ್ಲ್ಯಾಟ್ ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...