ಕೊರೊನಾ ವೈರಸ್ ಲಾಕ್ಡೌನ್ ಸಂದರ್ಭದಲ್ಲಿ ನೀಡಿದ ಸಮಾಜ ಸೇವೆಗಳನ್ನ ಪರಿಗಣಿಸಿ ಭಾರತೀಯ ಮೂಲದ ಬ್ರಿಟಿಷ್ ಬಾಲಕನಿಗೆ ಪ್ರತಿಷ್ಠಿತ ಡಯಾನಾ ಅವಾರ್ಡ್ ಮುಡಿಗೇರಿದೆ.
ಬ್ರಿಟನ್ನ ವೆಲ್ಲಿಂಗ್ಟನ್ ಕಾಲೇಜಿನ 15 ವರ್ಷದ ಬಾಲಕ ಇಶಾನ್ ಕಪೂರ್ ಈ ಅತ್ಯುನ್ನತ ಪ್ರಶಸ್ತಿಯನ್ನ ಪಡೆದುಕೊಂಡಿದ್ದಾನೆ.
ದೆಹಲಿ ಮೂಲದ ಈ ಬಾಲಕ ಶ್ರೀ ರಾಮಕೃಷ್ಣ ಆಶ್ರಮದ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಹಾಗೂ ಬಾಲಕಿಯರಿಗೆ ಸಮವಸ್ತ್ರ ಖರೀದಿ ಮಾಡಲು ಸಹಾಯ ಮಾಡಿದ್ದಾನೆ.
ಕೊರೊನಾ ವೈರಸ್ನಿಂದಾಗಿ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ತರಗತಿಗಳಲ್ಲಿ ನಡೆಯುತ್ತಿದ್ದ ಶಿಕ್ಷಣವು ಆನ್ಲೈನ್ ಶಿಕ್ಷಣವಾಗಿ ಮಾರ್ಪಾಡಾಗಿದೆ. ದೇಶದಲ್ಲಿ ಡಿಜಿಟಲ್ ಶಿಕ್ಷಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದೆ.
ಈ ಎಲ್ಲಾ ಅಂಶಗಳನ್ನ ಗಮನದಲ್ಲಿ ಇಟ್ಟುಕೊಂಡ ಇಶಾನ್ ದೇಣಿಗೆ ಸಂಗ್ರಹದ ಮೂಲಕ ಬರೋಬ್ಬರಿ 51,57,499 ರೂಪಾಯಿ ಹಣವನ್ನ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ್ದಾನೆ. ಮಾತ್ರವಲ್ಲದೇ 100ಕ್ಕೂ ಅಧಿಕ ಲ್ಯಾಪ್ಟಾಪ್ಗಳನ್ನೂ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ್ದಾನೆ.
ವೇಲ್ಸ್ ರಾಜಕುಮಾರಿಯಾದ ಡಯಾನಾ ಅವರ ಸವಿನೆನಪಿಗಾಗಿ 9 ರಿಂದ 25 ವರ್ಷದ ಯುವ ಜನತೆಗೆ ಅವರು ಮಾಡಿದ ಸಾಮಾಜಿಕ ಕಾರ್ಯವನ್ನ ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನ ನೀಡಲಾಗುತ್ತದೆ.