alex Certify ಡ್ರೈವಿಂಗ್‌ ಬರುತ್ತಾ ? IOCL ನಿಂದ ಚಾಲಕ ಹುದ್ದೆಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರೈವಿಂಗ್‌ ಬರುತ್ತಾ ? IOCL ನಿಂದ ಚಾಲಕ ಹುದ್ದೆಗೆ ಅರ್ಜಿ ಆಹ್ವಾನ

ಇಂಡಿಯನ್​ ಆಯಿಲ್​ ಕಾರ್ಪೊರೇಷನ್​ ಲಿಮಿಟೆಡ್​ (ಐಒಸಿಎಲ್​) ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿ ಜೂನಿಯರ್​ ಆಪರೇಟರ್​ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು ಅಧಿಕೃತ ಸೈಟ್​ iocl.com ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನಾಂಕವಾಗಿದೆ.

ಈ ನೇಮಕಾತಿ ಡ್ರೈವ್ ಮೂಲಕ ಸಂಸ್ಥೆಯಲ್ಲಿ ಒಟ್ಟು 39 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹತೆಗಳು, ಅನುಭವ, ಆಯ್ಕೆ ಮಾನದಂಡಗಳು ಮತ್ತು ಇತರ ವಿವರಗಳ ಬಗ್ಗೆ ಹೇಳುವುದಾದರೆ, ಆನ್​ಲೈನ್​ ಅರ್ಜಿ ಸ್ವೀಕೃತಿಗಾಗಿ ಪೋರ್ಟಲ್​ ತೆರೆಯುವ ದಿನಾಂಕ ಜುಲೈ 09, 2022, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 29.

ಲಿಖಿತ ಪರೀಕ್ಷೆಗೆ ತಾತ್ಕಾಲಿಕ ದಿನಾಂಕ ಆಗಸ್ಟ್​ 21, ಲಿಖಿತ ಪರೀಕ್ಷೆಯ ಶಾರ್ಟ್​ಲಿಸ್ಟ್​ ಮಾಡಿದ ಅಭ್ಯರ್ಥಿಗಳ ಫಲಿತಾಂಶವನ್ನು ಅಪ್​ಲೋಡ್​ ಮಾಡುವ ತಾತ್ಕಾಲಿಕ ದಿನಾಂಕ ಸೆಪ್ಟೆಂಬರ್​ 06.

ದಾಖಲೆಗಳು ಮತ್ತು ಚಾಲನಾ ಪರೀಕ್ಷೆ ಪರಿಶೀಲನೆ ಸೆ.20ರಿಂದ 24ರವರೆಗೆ ನಡೆಯುವುದು. ಅಂತಿಮ ಫಲಿತಾಂಶವನ್ನು ಅಕ್ಟೋಬರ್​ 14ರಂದು ಅಪ್​ಲೋಡ್​ ಮಾಡಲಾಗುತ್ತದೆ.

ಶಿಕ್ಷಣ ಅರ್ಹತೆ: ಸಾಮಾನ್ಯ ಇಡಬ್ಲ್ಯುಎಸ್​ ಮತ್ತು ಒಬಿಸಿ ವರ್ಗಕ್ಕೆ ಕನಿಷ್ಠ 45 ಶೇ. ಅಂಕಗಳೊಂದಿಗೆ ಹೈಯರ್​ ಸೆಕೆಂಡರಿ ಪೂರೈಸಿರಬೇಕು, ಎಸ್ಸಿ ಎಸ್ಟಿಗಾದರೆ ಶೇ.40 ಅಂಕಗಳು ಸಾಕು. ಹೆವಿವೆಹಿಕಲ್​ ಡ್ರೈವಿಂಗ್​ ಲೈಸೆನ್ಸ್​ ಹೊಂದಿರಬೇಕು.

ಆಯ್ಕೆಯ ವಿಧಾನವು ಲಿಖಿತ ಪರೀಕ್ಷೆ ಮತ್ತು ಕೌಶಲ್ಯ, ದೈಹಿಕ ಪರೀಕ್ಷೆ (ಚಾಲನಾ ಪರೀಕ್ಷೆ)ಯನ್ನು ಒಳಗೊಂಡಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...