alex Certify ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: IOCL​ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: IOCL​ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್​ ಆಯಿಲ್​ ಕಾರ್ಪೋರೇಷನ್​ ಲಿಮಿಟೆಡ್​​ ಟೆಕ್ನಿಕಲ್​ ಹಾಗೂ ನಾನ್​ ಟೆಕ್ನಿಕಲ್​​ ಟ್ರೇಡ್​ ಅಪ್ರೆಂಟಿಸೆಸ್​​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ತಮಿಳುನಾಡು, ಪಾಂಡಿಚೇರಿ, ಕರ್ನಾಟಕ, ಕೇರಳ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಒಟ್ಟು 400ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಇಂಡಿಯನ್​ ಆಯಿಲ್​​ ಐಓಸಿಎಲ್​ ನೇಮಕಾತಿ: ಖಾಲಿ ಇರುವ ಹುದ್ದೆಗಳು 480.

ಇಂಡಿಯನ್​ ಆಯಿಲ್​​ ಐಓಸಿಎಲ್ ವಯಸ್ಸಿನ ಮಿತಿ ಜೂನ್​​ 30ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗೆ ಕನಿಷ್ಟ 18 ವರ್ಷ ಹಾಗೂ ಗರಿಷ್ಟ 24 ವರ್ಷ ವಯಸ್ಸಾಗಿರಬೇಕು.

ಇಂಡಿಯನ್​ ಆಯಿಲ್​​ ಐಓಸಿಎಲ್ ನೇಮಕಾತಿ : ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಫಲಿತಾಂಶವನ್ನು ಪರಿಗಣನೆಗೆ ತೆಗೆದುಕೊಂಡು ಈ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಅಭ್ಯರ್ಥಿಗಳಿಗೆ ಬಹು ಆಯ್ಕೆ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಇಂಡಿಯನ್​ ಆಯಿಲ್​​ ಐಓಸಿಎಲ್ ನೇಮಕಾತಿ : ಅರ್ಜಿ ಸಲ್ಲಿಕೆ ವಿವರ

1. ಅರ್ಹ ಅಭ್ಯರ್ಥಿಗಳು www.iocl.com ಅಧಿಕೃತ ವೆಬ್​ಸೈಟ್​​ ಖಾತೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

2. ಆನ್​ಲೈನ್​​ ಅರ್ಜಿ ಸಲ್ಲಿಕೆ ಬಳಿಕ ಪೋಟೋ ಸ್ಕ್ಯಾನ್​ ಕಾಪಿ, ಅಂಕಪಟ್ಟಿ ಸೇರಿದಂತೆ ವಿವಿಧ ದಾಖಲೆಗಳ ಸ್ಕ್ಯಾನ್​ ಕಾಪಿ, ವಿದ್ಯಾರ್ಹತೆ, ಜಾತಿ ಪ್ರಮಾಣ ಪತ್ರ ಹಾಗೂ ಡಿಜಿಟಲ್​ ಸಹಿ ಒದಗಿಸಬೇಕು. ಯಾವುದೇ ಒಂದು ದಾಖಲೆ ಇಲ್ಲದೇ ಇದ್ದರೂ ಸಹ ನಿಮ್ಮ ಅರ್ಜಿ ತಿರಸ್ಕೃತವಾಗಲಿದೆ.

3. ಅಭ್ಯರ್ಥಿಗಳಿಗೆ ಪ್ರವೇಶ ಪ್ರಮಾಣ ಪತ್ರವು ಇ ಮೇಲ್​ ಇಲ್ಲವೇ ಎಸ್​ಎಂಎಸ್ ಮೂಲಕ ಬರಲಿದೆ.

ಇಂಡಿಯನ್​ ಆಯಿಲ್​​ ಐಓಸಿಎಲ್ ನೇಮಕಾತಿ : ಕೊನೆಯ ದಿನಾಂಕ

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆಗಸ್ಟ್​ 28 ಕೊನೆಯ ದಿನಾಂಕವಾಗಿದೆ.

ಇಂಡಿಯನ್​ ಆಯಿಲ್​​ ಐಓಸಿಎಲ್ ನೇಮಕಾತಿ : ದಿನಾಂಕ ಹಾಗೂ ಪರೀಕ್ಷೆ ನಡೆಯವ ಸ್ಥಳ

ಚೆನ್ನೈ, ಕೊಚ್ಚಿ, ಹೈದರಾಬಾದ್​, ವಿಜಯವಾಡ ಹಾಗೂ ಬೆಂಗಳೂರಿನಲ್ಲಿ ಸೆಪ್ಟೆಂಬರ್​​ 19ರಂದು ಪರಿಕ್ಷೆಗಳು ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...