ಭಾರತೀಯ ನೌಕಾಪಡೆಯ ಪ್ರತಿಷ್ಠಿತ ನೇವಲ್ ಅಕಾಡೆಮಿಯಲ್ಲಿ (ಐಎನ್ಎ) 4 ವರ್ಷದ ಬಿ.ಟೆಕ್ ಪದವಿ ಕೋರ್ಸ್ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗಿದೆ.
ಒಟ್ಟು 35 ಸೀಟುಗಳು ಮಾತ್ರವೇ ಖಾಲಿ ಇವೆ. ಕೇರಳದ ಎಳಿಮಲಾದಲ್ಲಿ ಇಂಡಿಯನ್ ನೇವಲ್ ಅಕಾಡೆಮಿ ಇದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು ಅಕ್ಟೋಬರ್ 10 ಆಗಿದೆ. ಒಟ್ಟಾರೆ ಖಾಲಿ ಸೀಟುಗಳ ಪೈಕಿ ಐದು ಶೈಕ್ಷ ಣಿಕ ವಿಭಾಗ ಹಾಗೂ ಬಾಕಿ 30 ಸೀಟುಗಳು ತಾಂತ್ರಿಕ ಮತ್ತು ಆಡಳಿತ ವಿಭಾಗದ ಪರಿಣತಿಯನ್ನು ಬಿ.ಟೆಕ್ ಪದವೀಧರರಿಗೆ ನೀಡಲಿವೆ.
IOCL ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ವಿವರ
ಅರ್ಹತೆ:
2021ರ ಜೆಇಇ ಮೇನ್ಸ್ ಪರೀಕ್ಷೆಗೆ ಹಾಜರಾದ ಅವಿವಾಹಿತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇದೆ. 2002ರ ಜು. 2 ರಿಂದ 2005ರ ಜ.1ರ ನಡುವೆ ಜನಿಸುವವರಿಗೆ ಮಾತ್ರವೇ ಆದ್ಯತೆ ನೀಡಲಾಗಿದೆ.
12ನೇ ತರಗತಿ ಅಥವಾ ಎರಡನೇ ವರ್ಷ ಪಿಯುಸಿಯಲ್ಲಿ ಸರಾಸರಿ 70% ಅಂಕಗಳೊಂದಿಗೆ ಅಭ್ಯರ್ಥಿಗಳು ಪಾಸ್ ಆಗಿರಬೇಕು. ಆ ಪೈಕಿ ಇಂಗ್ಲಿಷ್ನಲ್ಲಿ ಶೇ. 50ರಷ್ಟು ಮತ್ತು ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ಮ್ಯಾಥ್ಸ್ನಲ್ಲಿ ಸರಾಸರಿ 70%ಗೂ ಅಧಿಕ ಅಂಕಗಳನ್ನು ಪಡೆದಿರಬೇಕಾಗಿದೆ.
ಮನೆಯಲ್ಲೇ ಕುಳಿತು ಹಣ ಗಳಿಸಲು SBI ನೀಡ್ತಿದೆ ಭರ್ಜರಿ ಅವಕಾಶ
ಆಯ್ಕೆ ಪ್ರಕ್ರಿಯೆ:
ಅಕ್ಟೋಬರ್ -ನವೆಂಬರ್ ತಿಂಗಳಲ್ಲಿ ವಿಶಾಖಪಟ್ಟಣಂ, ಕೊಲ್ಕೊತಾ, ಭೋಪಾಲ್, ಬೆಂಗಳೂರಿನಲ್ಲಿ ಅರ್ಜಿ ಸಲ್ಲಿಸಿ ಶಾರ್ಟ್ಲಿಸ್ಟ್ ಆಗುವ ಅಭ್ಯರ್ಥಿಗಳಿಗೆ ಮುಖಾಮುಖಿ ಸಂದರ್ಶನಕ್ಕೆ ಕರೆಯಲಾಗುವುದು. ಇ-ಮೇಲ್ ಅಥವಾ ಎಸ್ಎಂಎಸ್ ಮೂಲಕ ಅರ್ಜಿದಾರರ ಆಯ್ಕೆ ಬಗ್ಗೆ ಸೂಚನೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.