ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್ಗೆ ಮುಂಚಿತವಾಗಿ, ದೆಹಲಿಯ ರಾಜ್ಪಥ್ನಲ್ಲಿ ರಿಹರ್ಸಲ್ಗಳು ಭರದಿಂದ ಸಾಗುತ್ತಿವೆ. ಭಾರತೀಯ ನೌಕಾಪಡೆಯು ಗಣತಂತ್ರ ಆಚರಣೆಗಾಗಿ ತಾಲೀಮು ನಡೆಸುತ್ತಿರುವ ವೀಡಿಯೊವನ್ನು ಭಾರತ ಸರ್ಕಾರ ಶನಿವಾರ ಟ್ವೀಟ್ ಮಾಡಿದೆ. ವಿಭಿನ್ನ ಟ್ಯೂನ್ ಇರುವ ಈ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ.
2.25 ನಿಮಿಷಗಳಷ್ಟಿರುವ ವಿಡಿಯೋದಲ್ಲಿ, ಭಾರತೀಯ ನೌಕಾಪಡೆಯ ಬ್ಯಾಂಡ್ ಸಮವಸ್ತ್ರ ಧರಿಸಿ, ಪ್ರಸಿದ್ಧ ಬಾಲಿವುಡ್ ಹಾಡೊಂದರ ಲಯಕ್ಕೆ ಚಲಿಸುವುದನ್ನು ನೋಡಬಹುದು. ರಕ್ಷಣಾ ಸಿಬ್ಬಂದಿ ತಮ್ಮ ರೈಫಲ್ಗಳ ವಿರುದ್ಧ ಚಪ್ಪಾಳೆ ತಟ್ಟುತ್ತಾ ಮೋನಿಕಾ ಓ ಮೈ ಡಾರ್ಲಿಂಗ್ ಹಾಡಿನ ಟ್ಯೂನ್ ಗೆ ಗ್ರೂವ್ ಮಾಡುತ್ತಿದ್ದಾರೆ.
ಇತ್ತ ನೌಕಾಪಡೆಯ ಬ್ಯಾಂಡ್ ಈ ಹಾಡನ್ನು ವಿಜೃಂಭಣೆಯಿಂದ ನುಡಿಸುತ್ತಿದೆ. 1967 ರಲ್ಲಿ ಬಿಡುಗಡೆಯಾದ ಚಲನಚಿತ್ರ ಕಾರವಾನ್ನ ಚಿತ್ರದ ಮೋನಿಕಾ ಓ ಮೈ ಡಾರ್ಲಿಂಗ್ ಈಗಲೂ ತನ್ನದೇ ಜನಪ್ರಿಯತೆ ಹೊಂದಿರುವ ಹಾಡು. ನೌಕಾಪಡೆಯ ಟ್ಯೂನ್ ಸೆಲೆಕ್ಷನ್ ಗೆ ನೆಟ್ಟಿಗುರು ಫಿದಾ ಆಗಿದ್ದು, ಪೋಸ್ಟ್ ಗೆ 3.46 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ದೊರೆತಿವೆ. ಈ ಪೋಸ್ಟ್ ಗೆ ನೀಡಿರುವ ಶೀರ್ಷಿಕೆ ಕೂಡ ವಿಭಿನ್ನವಾಗಿದ್ದು, ಟ್ವಿಟ್ಟರ್ ಬಳಕೆದಾರರು ಅಮೋಘ, ಅದ್ಭುತ ಎಂದು ಕಾಮೆಂಟ್ ಮಾಡುತ್ತಿದ್ದಾರೆ.