ಇತ್ತೀಚಿನ ದಿನಗಳಲ್ಲಿ, ಕೃತಕ ಬುದ್ಧಿಮತ್ತೆ ಕಲೆಯು ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ವಿಷಯವಾಗಿದೆ ಮತ್ತು ಅನೇಕ ಕಲಾವಿದರು ಇದರ ಬಳಕೆ ಮಾಡಿ ಹೊಸಹೊಸ ವಿನ್ಯಾಸ ರೂಪುಗೊಳಿಸುತ್ತಾರೆ. ಅಂಥದ್ದೇ ಮತ್ತೊಂದು ಟ್ವಿಟರ್ ಈಗ ವೈರಲ್ ಆಗಿದೆ, ಆದರೆ ಇದು ಮೂಲ ಒಂದರ ವಿಡಂಬನಾತ್ಮಕ ಆವೃತ್ತಿಯಾಗಿದೆ.
ಕೃತಕ ಬುದ್ಧಿಮತ್ತೆಯನ್ನು ಅಸಂಬದ್ಧ ರೀತಿಯಲ್ಲಿ ವೈರಲ್ ಮಾಡಲಾಗುತ್ತಿದೆ. ಟೈಗರ್ ಶ್ರಾಫ್, ಅಜಯ್ ದೇವಗನ್ ಸೇರಿದಂತೆ ಹಲವು ಚಿತ್ರನಟರಂತೆ ತೋರುವ ಫೋಟೋ ಶೇರ್ ಆಗುತ್ತಿದೆ. ಇವರ ವಿವಿಧ ವಿಚಿತ್ರ ಆಕೃತಿಗಳನ್ನು ರಚಿಸಲಾಗುತ್ತಿದೆ.
ಸಿಕ್ಸ್ಪ್ಯಾಕ್ ಎಂದರೆ ಈಗ ಬಹುತೇಕ ಮಂದಿಗೆ ಇಷ್ಟ. ಆದರೆ ಅದನ್ನು ತಾವು ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೃತಕ ಬುದ್ಧಿಮತ್ತೆ ಬಳಸಿಕೊಂಡು ತಮ್ಮ ಇಷ್ಟದ ಚಿತ್ರನಟರನ್ನು ಅದಕ್ಕೆ ಜೋಡಿಸಿ ವಿಚಿತ್ರ ಬಗೆಯಲ್ಲಿ ಸಿಕ್ಸ್ ಪ್ಯಾಕ್ ರಚನೆ ಮಾಡಲಾಗುತ್ತಿದೆ.
ಇದನ್ನು ನೋಡಿದರೆ ಚಿತ್ರನಟರೇ ಈ ವೇಷದಲ್ಲಿ ಇರುವಂತೆ ಕಾಣಿಸುತ್ತದೆ, ಅಂಥ ಕೆಲವು ವಿಡಂಬನಾತ್ಮಕ ವೈರಲ್ ಚಿತ್ರಗಳು ಇಲ್ಲಿವೆ.