ಪೇಟ ಭಾರತೀಯ ಪುರುಷರ ವೇಷಭೂಷಣದ ಪ್ರಮುಖ ಭಾಗ. ನಮ್ಮ ಕರ್ನಾಟಕದಲ್ಲಿ ಮೈಸೂರು ಪೇಟ ಅತೀ ಹೆಚ್ಚು ಜನಪ್ರಿಯವಾಗಿರುವಂತದ್ದು.
ಸಾಮಾನ್ಯವಾಗಿ ಸಾಂಪ್ರದಾಯಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ದೇಶದ ಹೆಚ್ಚಿನ ಕಡೆಗಳಲ್ಲಿ ಅಲ್ಲಿನ ಸಂಪ್ರದಾಯದಂತೆ ಈ ಪೇಟವನ್ನು ಧರಿಸಲಾಗುತ್ತದೆ. ನೀವೂ ಕೂಡ ಯಾವಾಗಲಾದರೂ ಈ ರೀತಿ ಪೇಟವನ್ನು ಧರಿಸಿರ್ತೀರಾ. ಹೀಗಾಗಿ ಆ ಪೇಟವನ್ನು ಕಟ್ಟೋದಕ್ಕೆ ಒಟ್ಟು ಎಷ್ಟು ಟೈಮ್ ಬೇಕೆಂಬುದು ನಿಮಗೆ ಚೆನ್ನಾಗಿಯೇ ಗೊತ್ತಿರುತ್ತೆ.
ಆದ್ರೆ ಇಲ್ಲೊಬ್ಬರು ಪೇಟವನ್ನು ಅತ್ಯಂತ ವೇಗವಾಗಿ ಕಟ್ಟುವ ಮೂಲಕ ವಿಶ್ವದಾಖಲೆಯನ್ನು ಬರೆದಿದ್ದಾರೆ. ಇದರ ಜೊತೆ ಅವರು ಈ ಪೇಟ ಕಟ್ಟೋದಕ್ಕೆ ತೆಗೆದುಕೊಂಡ ಸಮಯ ಕೇಳಿದ್ರೆ ನಿಮಗೂ ಕೂಡಾ ಶಾಕ್ ಆಗುತ್ತೆ. ಯಾಕಂದ್ರೆ ಕೇವಲ 14.12 ಸೆಕೆಂಡುಗಳಲ್ಲಿ ಪೇಟ ಕಟ್ಟುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ.
ಆದಿತ್ಯ ಪಚೋಲಿ ಎಂಬವರೇ ಈ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದು ಈ ಬಗ್ಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ಕೇವಲ 14 ಸೆಕೆಂಡುಗಳಲ್ಲಿ ಆದಿತ್ಯ ಇನ್ನೊಬ್ಬ ವ್ಯಕ್ತಿಗೆ ಪೇಟವನ್ನು ಕಟ್ಟುವ ವೀಡಿಯೊವನ್ನು ಶೇರ್ ಮಾಡಲಾಗಿದೆ.