alex Certify ಸಿಗರೇಟ್​ ತುಂಡು ಬಳಸಿ ಆಟಿಕೆ ತಯಾರಿಸುವ ಫ್ಯಾಕ್ಟರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಗರೇಟ್​ ತುಂಡು ಬಳಸಿ ಆಟಿಕೆ ತಯಾರಿಸುವ ಫ್ಯಾಕ್ಟರಿ

ನಮ್ಮ ನಡುವೆ ಹೊಸ ಪ್ರಯೋಗಗಳು ನಡೆಯುವುದನ್ನು ಕಾಣುತ್ತಿರುತ್ತೇವೆ, ಇದೀಗ ದೆಹಲಿಯ ಕಾರ್ಖಾನೆಯೊಂದು ಸಿಗರೇಟ್​ ತುಂಡು ಬಳಸಿ ಆಟಿಕೆ ತಯಾರಿಸಿ ಗಮನ ಸೆಳೆಯುತ್ತಿದೆ.

ಲಕ್ಷಾಂತರ ಜನರು ಸಿಗರೇಟ್​ ಉರಿಸಿ ಕೊನೆಯ ಭಾಗ ಎಸೆದಿರುತ್ತಾರೆ. ಅದನ್ನು ಬೀದಿಗಳಿಂದ ಸಂಗ್ರಹಿಸಿದ ನಂತರ ಸ್ವಚ್ಛಗೊಳಿಸಲಾಗುತ್ತದೆ ಮತ್ತು ಬ್ಲೀಚ್​ ಮಾಡಲಾಗುತ್ತದೆ. ಆಟಿಕೆಗಳು ಮತ್ತು ದಿಂಬುಗಳು ಸೇರಿದಂತೆ ವಿವಿಧ ಉತ್ಪನ್ನಗಳಿಗಾಗಿ ಮರುಸಂಸ್ಕರಿಸುವುದು ಉದ್ಯಮಿ ನಮನ್​ ಗುಪ್ತಾ ಅವರ ಕಲ್ಪನೆಯ ಕೂಸು.

ನಾವು ಪ್ರತಿ ದಿನ 1,000 ಕಿಲೋಗ್ರಾಂಗಳಷ್ಟು ಸಂಸ್ಕರಣೆ ಮಾಡುತ್ತಿದ್ದೇವೆ… ವಾರ್ಷಿಕವಾಗಿ ನಾವು ಲಕ್ಷಾಂತರ ಸಿಗರೇಟ್​ ತುಂಡುಗಳನ್ನು ಮರುಬಳಕೆ ಮಾಡಲು ಸಮರ್ಥರಾಗಿದ್ದೇವೆ ಎಂದು ಅವರು ನ್ಯೂಸ್​ ಏಜೆನ್ಸಿಗೆ ಮಾಹಿತಿ ನೀಡಿದ್ದಾರೆ.

ಕೆಲಸಗಾರರು ಬಟ್​ಗಳ ಹೊರ ಪದರ ಮತ್ತು ತಂಬಾಕನ್ನು ಪ್ರತ್ಯೇಕಿಸುತ್ತಾರೆ, ಇವುಗಳನ್ನು ಕ್ರಮವಾಗಿ ಮರುಬಳಕೆಯ ಕಾಗದ ಮತ್ತು ಕಾಂಪೋಸ್ಟ್​ ಪುಡಿಯಾಗಿ ಪರಿವತಿರ್ಸಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ 267 ಮಿಲಿಯನ್​ ಜನರು, ಭಾರತದ ವಯಸ್ಕ ಜನಸಂಖ್ಯೆಯ ಸುಮಾರು 30 ಪ್ರತಿಶತದಷ್ಟು ಜನರು ತಂಬಾಕು ಬಳಸುತ್ತಾರೆ ಬಳಿಕ ಬೀದಿಗಳಲ್ಲಿ ಅದರ ತ್ಯಾಜ್ಯವನ್ನು ಹಾಕುತ್ತಾರೆ.

ನಾವು ಈ ಕೆಲಸ ಮಾಡುವುದರಿಂದ ನಮ್ಮ ಪರಿಸರವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ ಎಂದು ಕಾರ್ಖಾನೆಯಲ್ಲಿ ಕೆಲಸ ಮಾಡುವ ಪೂನಂ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...