ಕಾಶ್ಮೀರದ ಚಿತ್ರಣ ಹಂತಹಂತವಾಗಿ ಬದಲಾಗುತ್ತಿದ್ದು, ಭಾರತೀಯ ಸೇನೆಯು ತನ್ನ ಚಟುವಟಿಕೆಯನ್ನು ಕೇವಲ ಭದ್ರತೆ ನೀಡುವುದಕ್ಕೆ ಸೀಮಿತವಾಗದೇ, ಆ ಭಾಗದ ವಿಶೇಷ ಚೇತನ ಯುವಕರಿಗೆ ವಿಶೇಷ ತರಬೇತಿ ನೀಡಿದೆ.
ಗುಲ್ಮಾರ್ಗ್ನಲ್ಲಿರುವ ಭಾರತೀಯ ಸೇನೆಯ ಹೈ ಆಲ್ಟಿಟ್ಯೂಡ್ ವಾರ್ಫೇರ್ ಸ್ಕೂಲ್ನಲ್ಲಿ ಮಂಜಿನ ರಾಶಿಯ ಮೇಲೆ ಜಾರುವ ಸ್ಕೀಯಿಂಗ್ ತರಬೇತಿ ನೀಡಿದೆ. ಎರಡು ವಾರಗಳ ಕಠಿಣ ತರಬೇತಿ ಮುಗಿದಿದ್ದು, ಇನ್ನೂ ಹೆಚ್ಚಿನ ಕಾಶ್ಮೀರ ನಾಗರಿಕರು ಈ ರೋಮಾಂಚಕಾರಿಯಾದ ಕ್ರೀಡಾ ತರಬೇತಿ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಭಾವುಕರಾಗಿ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ಸಚಿವ ಶ್ರೀರಾಮುಲು
ಜೈಪುರದ ಸ್ವಯಂಸೇವಾ ಸಂಸ್ಥೆ ಭಗವಾನ್ ಮಹಾವೀರ್ ವಿಕಲಾಂಗ ಸಹಾಯತಾ ಸಮಿತಿಯಿಂದ ಕೃತಕ ಅಂಗಗಳು ಮತ್ತು ಇತರ ವಿಶೇಷ ಪರಿಕರಗಳನ್ನು ಸಹ ಒದಗಿಸಲಾಗಿದೆ.
ಮೊದಲ ತಂಡವು 14 ದಿನಗಳ ಪ್ರಾಥಮಿಕ ಹಂತದ ಸ್ಕೀಯಿಂಗ್ ಕೋರ್ಸ್ ಅನ್ನು ಕಷ್ಟದ ಪರಿಸ್ಥಿತಿಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ತಂಡವನ್ನು ಲೆಫ್ಟಿನೆಂಟ್ ಕರ್ನಲ್ ಧರಂದತ್ ಗೋಯೆಲ್ ಮುನ್ನೆಡೆಸಿದ್ದರು.