ಲೇಹ್: ಭಾರತೀಯ ಸೇನಾ ಅಧಿಕಾರಿಯು ಲೇಹ್ ನಿಂದ ಮನಾಲಿಗೆ 472 ಕಿ.ಮೀ. ದೂರ 34 ಗಂಟೆಗಳ 54 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ‘ವೇಗದ ಸೋಲೊ ಸೈಕ್ಲಿಂಗ್ (ಪುರುಷರು)’ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಲೆಫ್ಟಿನೆಂಟ್ ಕರ್ನಲ್ ಶ್ರೀಪಾದ ಶ್ರೀರಾಮ್ ಅವರು ಶನಿವಾರ ಬೆಳಗ್ಗೆ 4 ಗಂಟೆಗೆ ಲಡಾಖ್‌ನ ಲೇಹ್‌ನಿಂದ ಸೈಕ್ಲಿಂಗ್ ಆರಂಭಿಸಿ, ಅವರು ಭಾನುವಾರ ಅಂದರೆ ಸೆಪ್ಟೆಂಬರ್ 26ರ ಮಧ್ಯಾಹ್ನ ಮನಾಲಿಯನ್ನು ತಲುಪಿದ್ದಾರೆ.
ಭಾರತೀಯ ಸೇನೆಯ ನಾರ್ದರ್ನ್ ಕಮಾಂಡ್ ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಧಿಕಾರಿಯ ಫೋಟೋ ಅಪ್ಲೋಡ್ ಮಾಡಿ, ಸಾಧನೆ ಬಗ್ಗೆ ತಿಳಿಸಲಾಗಿದೆ. ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ಅಧಿಕಾರಿಯು 34 ಗಂಟೆ 54 ನಿಮಿಷಗಳಲ್ಲಿ ಮಾರ್ಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.