ಓಟಿಂಗ್ ಫೈರಿಂಗ್ ನಲ್ಲಿ ಭಾಗಿಯಾಗಿದ್ದ 21 ಪ್ಯಾರಾ ವಿಶೇಷ ಪಡೆಗಳ ಅಧಿಕಾರಿಗಳು ಮತ್ತು ಸೈನಿಕರ ಹೇಳಿಕೆಗಳನ್ನು ಪರಿಶೀಲಿಸಲು ಮತ್ತು ದಾಖಲಿಸಲು ಭಾರತೀಯ ಸೇನೆಯು, ನಾಗಾಲ್ಯಾಂಡ್‌ನ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಅನುಮತಿ ನೀಡಿದೆ.
ನಾಗಾಲ್ಯಾಂಡ್ ಎಸ್‌ಐಟಿ ನಾಳೆ ಅಥವಾ ಮರುದಿನ ಅಸ್ಸಾಂನ ಜೋರ್ಹತ್‌ನಲ್ಲಿರುವ ರೈನ್‌ಫಾರೆಸ್ಟ್ ಸಂಶೋಧನಾ ಸಂಸ್ಥೆಯಲ್ಲಿ, ಅಧಿಕಾರಿಗಳು ಮತ್ತು ಜವಾನರ ಹೇಳಿಕೆಗಳನ್ನು ದಾಖಲಿಸುವ ಸಾಧ್ಯತೆಯಿದೆ ಎಂದು ಉನ್ನತ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಮೋನ್ ಜಿಲ್ಲೆಯಲ್ಲಿ ನಡೆದ 14 ನಾಗರಿಕರ ಹತ್ಯೆಯ ಬಗ್ಗೆ ತನಿಖೆ ನಡೆಸಲು ನಾಗಾಲ್ಯಾಂಡ್ ಸರ್ಕಾರ 8 ಸದಸ್ಯರ ಎಸ್‌ಐಟಿಯನ್ನು ರಚಿಸಿತ್ತು. ತನಿಖೆಯನ್ನು ತ್ವರಿತಗೊಳಿಸಲು, ಎಸ್‌ಐಟಿ ತಂಡಕ್ಕೆ ಐವರು ಐಪಿಎಸ್ ಅಧಿಕಾರಿಗಳು ಸೇರಿದಂತೆ ಒಟ್ಟು 22 ಅಧಿಕಾರಿಗಳನ್ನು ಸೇರಿಸಲಾಗಿದೆ.
ವಿಡಿಯೋ: ಶಾರುಖ್ ಖಾನ್ ಆಗಿ ಬದಲಾದ ಮೇಕಪ್ ಕಲಾವಿದೆ
ಈ ನಡುವೆ ನಡೆಯುತ್ತಿರುವ ನ್ಯಾಯಾಲಯದ ವಿಚಾರಣೆಯ ಭಾಗವಾಗಿರುವ ಸೇನಾ ಅಧಿಕಾರಿಗಳ ಪ್ರತ್ಯೇಕ ತಂಡವು ಬುಧವಾರ ನಾಗಾಲ್ಯಾಂಡ್‌ನ ಟಿಜಿತ್ ಪೊಲೀಸ್ ಠಾಣೆಗೆ ಭೇಟಿ ನೀಡಿದೆ. ಡಿಸೆಂಬರ್ 4 ರಂದು ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯ ತಿರು-ಓಟಿಂಗ್ ರಸ್ತೆಯಲ್ಲಿ ಬರುತ್ತಿದ್ದ ಟ್ರಕ್‌ನಲ್ಲಿ ಶಿಕಾರಿ ರೈಫಲ್ ಕಂಡೆವು, ಅದರಲ್ಲಿದ್ದವರೆ ಆ ರೈಫಲ್ ಅನ್ನು ಕೊಂಡೊಯ್ಯುತ್ತಿದ್ದರು ಎಂದು ಭಾವಿಸಿದ ನಂತರ ಪಡೆಗಳು ತಕ್ಷಣವೇ ಗುಂಡಿನ ದಾಳಿ ನಡೆಸಿದ್ದು, ಟ್ರಕ್ ನಲ್ಲಿದ್ದ ಆರು ಕಲ್ಲಿದ್ದಲು ಗಣಿಗಾರರನ್ನು ಫೈರಿಂಗ್ ನಲ್ಲಿ ಕೊಂದಿದ್ದಾರೆ. ಈ ಘಟನೆಯಿಂದ ಕುಪಿತಗೊಂಡ ಗ್ರಾಮಸ್ಥರು ಮಾರಕಾಸ್ತ್ರಗಳಿಂದ ಸೈನಿಕರ ಮೇಲೆ ದಾಳಿ ನಡೆಸಿದ್ದರಿಂದ ವಿಷಯ ಕೈ ಮೀರಿತು. ಈ ಘಟನೆಯಲ್ಲಿ 13 ಜನ ಸ್ಥಳೀಯರು ಹಾಗೂ ಓರ್ವ ಸೈನಿಕ ಸಾವನ್ನಪ್ಪಿದರು.