alex Certify ಹೊಸ ಇತಿಹಾಸ ನಿರ್ಮಿಸಿದ ಭಾರತೀಯ ವಾಯುಪಡೆ: ಹೆದ್ದಾರಿಯಲ್ಲಿ ಲ್ಯಾಂಡ್‌ ಆದ ಸುಖೋಯ್​ Su-30 ಫೈಟರ್​ ಜೆಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಇತಿಹಾಸ ನಿರ್ಮಿಸಿದ ಭಾರತೀಯ ವಾಯುಪಡೆ: ಹೆದ್ದಾರಿಯಲ್ಲಿ ಲ್ಯಾಂಡ್‌ ಆದ ಸುಖೋಯ್​ Su-30 ಫೈಟರ್​ ಜೆಟ್​

ಭಾರತೀಯ ವಾಯುಪಡೆಯ ಮುಕುಟ ಎಂದೇ ಕರೆಯಿಸಿಕೊಳ್ಳುವ ಸುಖೋಯ್ Su-30 MKI ಫೈಟರ್ ಜೆಟ್​ ದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದೇ ಮೊದಲ ಬಾರಿಗೆ ಭೂಸ್ಪರ್ಶ ಕಂಡಿದೆ. ಈ ಹೊಸ ಇತಿಹಾಸವನ್ನು ರಾಜಸ್ಥಾನದ ಜಾಲೂರ್​ನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಚಿಸಲಾಗಿದೆ.

ಸುಖೋಯ್​ ಫೈಟರ್​ ಜೆಟ್​ ಮಾತ್ರವಲ್ಲದೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಇದ್ದ ಭಾರತೀಯ ವಾಯುಪಡೆಯ ಸಿ 130 ಜೆ ಸೂಪರ್​ ಹರ್ಕ್ಯೂಲಸ್​ ವಿಮಾನವು ಜಾಲೋರ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂ ಸ್ಪರ್ಶ ಕಂಡಿದೆ. ರಾಜನಾಥ್​ ಸಿಂಗ್​ ಹಾಗೂ ನಿತಿನ್​ ಗಡ್ಕರಿಗೆ ಏರ್​ ಚೀಫ್​ ಮಾರ್ಷಲ್​ ಆರ್​ಕೆಎಸ್​ ಭದಾರಿಯಾ ಕೂಡ ಸಾಥ್​ ನೀಡಿದ್ರು.

ಕೇಂದ್ರ ಸಚಿವರಾದ ರಾಜನಾಥ್​ ಸಿಂಗ್​ ಹಾಗೂ ನಿತಿನ್​ ಗಡ್ಕರಿ ರಾಷ್ಟ್ರೀಯ ಹೆದ್ದಾರಿ 925 ಎನಲ್ಲಿ ಹೆದ್ದಾರಿ ತುರ್ತು ಭೂ ಸ್ಪರ್ಶ ಸೌಲಭ್ಯವನ್ನು ಉದ್ಘಾಟಿಸಿದರು. ರಾಜಸ್ಥಾನದ ಬಾರ್ಮೇರ್​ನಲ್ಲಿರುವ ಸತ್ತಾ – ಗಂಧವ್​​ನಲ್ಲಿ ತುರ್ತು ಭೂ ಸ್ಪರ್ಶ ಸೌಲಭ್ಯ ನಿರ್ಮಿಸಲಾಗಿದೆ.

ಭಾರತೀಯ ವಾಯುಪಡೆಯು ತುರ್ತು ಪರಿಸ್ಥಿತಿಗಳಲ್ಲಿ ಲ್ಯಾಂಡ್​ ಆಗುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ 925 ಎನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಸೌಲಭ್ಯವನ್ನು ಅಭಿವೃದ್ಧಿಪಡಿಸಿದೆ .

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...