ಭಾರತೀಯ ವಾಯುಪಡೆಯ ಮುಕುಟ ಎಂದೇ ಕರೆಯಿಸಿಕೊಳ್ಳುವ ಸುಖೋಯ್ Su-30 MKI ಫೈಟರ್ ಜೆಟ್ ದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದೇ ಮೊದಲ ಬಾರಿಗೆ ಭೂಸ್ಪರ್ಶ ಕಂಡಿದೆ. ಈ ಹೊಸ ಇತಿಹಾಸವನ್ನು ರಾಜಸ್ಥಾನದ ಜಾಲೂರ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಚಿಸಲಾಗಿದೆ.
ಸುಖೋಯ್ ಫೈಟರ್ ಜೆಟ್ ಮಾತ್ರವಲ್ಲದೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಇದ್ದ ಭಾರತೀಯ ವಾಯುಪಡೆಯ ಸಿ 130 ಜೆ ಸೂಪರ್ ಹರ್ಕ್ಯೂಲಸ್ ವಿಮಾನವು ಜಾಲೋರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂ ಸ್ಪರ್ಶ ಕಂಡಿದೆ. ರಾಜನಾಥ್ ಸಿಂಗ್ ಹಾಗೂ ನಿತಿನ್ ಗಡ್ಕರಿಗೆ ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭದಾರಿಯಾ ಕೂಡ ಸಾಥ್ ನೀಡಿದ್ರು.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಹಾಗೂ ನಿತಿನ್ ಗಡ್ಕರಿ ರಾಷ್ಟ್ರೀಯ ಹೆದ್ದಾರಿ 925 ಎನಲ್ಲಿ ಹೆದ್ದಾರಿ ತುರ್ತು ಭೂ ಸ್ಪರ್ಶ ಸೌಲಭ್ಯವನ್ನು ಉದ್ಘಾಟಿಸಿದರು. ರಾಜಸ್ಥಾನದ ಬಾರ್ಮೇರ್ನಲ್ಲಿರುವ ಸತ್ತಾ – ಗಂಧವ್ನಲ್ಲಿ ತುರ್ತು ಭೂ ಸ್ಪರ್ಶ ಸೌಲಭ್ಯ ನಿರ್ಮಿಸಲಾಗಿದೆ.
ಭಾರತೀಯ ವಾಯುಪಡೆಯು ತುರ್ತು ಪರಿಸ್ಥಿತಿಗಳಲ್ಲಿ ಲ್ಯಾಂಡ್ ಆಗುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ 925 ಎನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಸೌಲಭ್ಯವನ್ನು ಅಭಿವೃದ್ಧಿಪಡಿಸಿದೆ .