alex Certify ಪಂದ್ಯ ನಡೆಯುವಾಗಲೇ ಮೈದಾನಕ್ಕೆ ನುಗ್ಗಿ ಟೀಮ್ ಇಂಡಿಯಾ ನಾಯಕನನ್ನು ಬಿಗಿದಪ್ಪಿದ ಅಭಿಮಾನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂದ್ಯ ನಡೆಯುವಾಗಲೇ ಮೈದಾನಕ್ಕೆ ನುಗ್ಗಿ ಟೀಮ್ ಇಂಡಿಯಾ ನಾಯಕನನ್ನು ಬಿಗಿದಪ್ಪಿದ ಅಭಿಮಾನಿ…!

ಶನಿವಾರದಂದು ರಾಯಪುರದಲ್ಲಿ ನಡೆದ ಟೀಮ್ ಇಂಡಿಯಾ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಭಾರತ, ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿದೆ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಬ್ಬರಿಸಿದ್ದು ಕೇವಲ 50 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 51 ರನ್ ಸಿಡಿಸಿದ್ದಾರೆ. ಅಲ್ಲದೆ ಮೊಹಮ್ಮದ್ ಶಮಿ ಕೇವಲ 18 ರನ್ ನೀಡಿ ಮೂರು ವಿಕೆಟ್ ಗಳಿಸಿದ್ದು ಗೆಲುವಿಗೆ ನೆರವಾಯಿತು.

ಈ ಪಂದ್ಯದ ವೇಳೆ ಅಪರೂಪದ ಘಟನೆಯೊಂದು ನಡೆದಿದೆ. ಟೀಮ್ ಇಂಡಿಯಾ ಬ್ಯಾಟಿಂಗ್ ನ 10ನೇ ಓವರ್ ವೇಳೆ ಬಾಲಕನೊಬ್ಬ ಮೈದಾನಕ್ಕೆ ನುಗ್ಗಿ ರೋಹಿತ್ ಶರ್ಮಾ ಅವರನ್ನು ಅಪ್ಪಿಕೊಂಡಿದ್ದಾನೆ. ತಕ್ಷಣವೇ ಭದ್ರತಾ ಸಿಬ್ಬಂದಿ ಅಲ್ಲಿಗೆ ಬಂದಿದ್ದು, ಬಾಲಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ರೋಹಿತ್ ಶರ್ಮಾ ಸಿಬ್ಬಂದಿಗೆ ಸೂಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...