ಮುಂದಿನ ಐದು ವರ್ಷಗಳಲ್ಲಿ ಭಾರತದ ಸಸ್ಯವರ್ಗದೊಳಗೆ ಆಫ್ರಿಕಾದ ಡಜ಼ನ್‌ನಷ್ಟು ಚೀತಾಗಳನ್ನು ಪರಿಚಯಿಸುವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 40 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಿದೆ.
ದೇಶದಲ್ಲಿದ್ದ ಏಷ್ಯಾಟಿಕ್ ಚೀತಾಗಳೆಲ್ಲಾ 1952ರಲ್ಲೇ ನಶಿಸಿ ಹೋಗಿದ್ದು, ಅವುಗಳ ಆಫ್ರಿಕನ್ ಸಹೋದರರನ್ನು ಇಲ್ಲಿಗೆ ಕರೆತಂದು ಸಂತತಿ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಹೆಜ್ಜೆ ಇಟ್ಟಿರುವ ಭಾರತ ಸರ್ಕಾರ ಈ ಸಂಬಂಧ ಆಫ್ರಿಕಾದ ದೇಶಗಳಾದ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾಗಳೊಂದಿಗೆ ಮಾತುಕತೆಯಲ್ಲಿ ಭಾಗಿಯಾಗಿದೆ.
ಪರ್ಫೆಕ್ಟ್ ಆಗಿರಲಿ ನಿಮ್ಮ ಬೀಚ್ ಲುಕ್….!
12-14 ಚೀತಾಗಳು (8-10 ಗಂಡು ಚೀತಾಗಳು ಮತ್ತು 4-6 ಹೆಣ್ಣುಗಳು) ಭಾರತದ ಕಾಡುಗಳಿಗೆ ಪ್ರವೇಶಿಸುವ ನಿರೀಕ್ಷೆ ಇದೆ.
ಚೀತಾಗಳನ್ನು ದೇಶದ ವನಸಂಪತ್ತಿಗೆ ಪರಿಚಯಿಸುವ ಈ ಯೋಜನೆಗೆ 2021-22 ರಿಂದ 2025-26ರವರೆಗೂ 38.70 ಕೋಟಿ ರೂಪಾಯಿಗಳನ್ನು ಪ್ರಾಜೆಕ್ಟ್ ಟೈಗರ್ ಅಡಿ ವಿನಿಯೋಗಿಸಲಾಗುವುದು ಎಂದು ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ತಿಳಿಸಿದ್ದಾರೆ.