
ಈ ಮೂಲಕ ಜಪಾನ್, ಫಿಲಿಫೈನ್ಸ್, ವಿಯೆಟ್ನಾಂ, ಕುಕ್ ದ್ವೀಪ ಹಾಗೂ ಚೀನಾವನ್ನು ಒಳಗೊಂಡ ಏಷ್ಯಾ ಮತ್ತು ಪೆಸಿಫಿಕ್ ರಾಜ್ಯಗಳ ಆರನೇ ಗುಂಪಿಗೆ ಭಾರತವು ಮರು ಆಯ್ಕೆಯಾದಂತಾಗಿದೆ.
ಭಾರತವು 2021-25ರ ಅವಧಿಗೆ 164 ಮತಗಳೊಂದಿಗೆ ಯುನೆಸ್ಕೋದ ಕಾರ್ಯಕಾರಿ ಮಂಡಳಿಗೆ ಮರು ಆಯ್ಕೆಯಾಗಿದೆ ಎಂದು ಪ್ಯಾರಿಸ್ ಮೂಲದ ಯುನೆಸ್ಕೋಗೆ ಭಾರತದ ಶಾಶ್ವತ ನಿಯೋಗ ಟ್ವೀಟ್ ಮಾಡಿದೆ.
ಯುನೆಸ್ಕೋ ವಿಶ್ವಸಂಸ್ಥೆ ಮೂರು ಸಾಂವಿಧಾನಿಕ ಅಂಗಗಳಲ್ಲಿ ಒಂದಾಗಿದೆ. ವಿಶ್ವ ಸಂಸ್ಥೆಯ ಕಾರ್ಯಕ್ರಮಗಳು ಹಾಗೂ ಪ್ರಧಾನ ನಿರ್ದೇಶಕರು ಸಲ್ಲಿಸುವ ಬಜೆಟ್ ಅಂದಾಜಿಗೆ ಸಂಬಂಧಿಸಿದ ವಿಚಾರಗಳನ್ನು ಯುನೆಸ್ಕೋ ಪರಿಶೀಲನೆ ಮಾಡುತ್ತದೆ.