ಡಿಜಿಟಲ್ ಕ್ವಾಲಿಟಿ ಲೈಫ್‌ನಲ್ಲಿ ಜಾಗತಿಕ ಶ್ರೇಯಾಂಕದಲ್ಲಿ ಭಾರತವು 59 ನೇ ಸ್ಥಾನದಲ್ಲಿದ್ದು, ಮೂಲ ಸೌಕರ್ಯದಲ್ಲಿ ಬಹಳ ದುರ್ಬಲವಾಗಿದೆ ಎಂದು ವರದಿ ತಿಳಿಸಿದೆ.
ಡಿಜಿಟಲ್ ಗುಣಮಟ್ಟವನ್ನು ಮೇಲ್ಮಟ್ಟಕ್ಕೇರಿಸುವಲ್ಲಿ ಸುಧಾರಿಸಿಲ್ಲ, ಕಳೆದ ವರ್ಷದಿಂದ ದೇಶವು ತನ್ನ ಶ್ರೇಯಾಂಕವನ್ನು ಬದಲಾಯಿಸಿಲ್ಲ. ಈ ಪಟ್ಟಿಯಲ್ಲಿ ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದ್ದು, ಭಾರತದಲ್ಲಿ ತನ್ನ ಇ-ಮೂಲಸೌಕರ್ಯವನ್ನು ಶೇಕಡಾ 70ರಷ್ಟು ಸುಧಾರಿಸಬೇಕಾಗಿದೆ.
ವಿಪಿಎನ್ ಸೇವಾ ಕಂಪನಿಯ ವಾರ್ಷಿಕ ವರದಿಯಲ್ಲಿ ಈ ಅಂಶಗಳಿದ್ದು, ಭಾರತದಲ್ಲಿ ಇಂರ್ಟನೆಟ್ ಗುಣಮಟ್ಟವು ತುಲನಾತ್ಮಕವಾಗಿ ಸಾಧಾರಣವಾಗಿದೆ. ಇಂಟರ್ನೆಟ್ ಗುಣಮಟ್ಟ, ಇಂಟರ್ನೆಟ್ ವೇಗ, ಸ್ಥಿರತೆ ಮತ್ತು ಬೆಳವಣಿಗೆಯನ್ನು ಪರಿಗಣಿಸಿ ವಿಶ್ವದಲ್ಲಿ 57 ನೇ ಸ್ಥಾನದಲ್ಲಿದೆ.
ಇಂಟರ್ನೆಟ್ ವೇಗಕ್ಕೆ ಸಂಬಂಧಿಸಿದಂತೆ ಭಾರತದ ಸ್ಥಿರ ಬ್ರಾಡ್ಬ್ಯಾಂಡ್ ಇಂಟರ್ನೆಟ್, ಮೊಬೈಲ್ ಇಂಟರ್ನೆಟ್ ಬಳಕೆಗಿಂತ ಉತ್ತಮ ಸ್ಥಾನದಲ್ಲಿದೆ. ಇಂಟರ್ನೆಟ್ ಕೆೈಗೆಟಕುವ ದರದ ವಿಚಾರದಲ್ಲಿ ಭಾರತವು ವಿಶ್ವದಲ್ಲಿ 21 ನೇ ಸ್ಥಾನದಲ್ಲಿದೆ. ಕಳೆದ ವರ್ಷದಿಂದ ಇದು ಸುಧಾರಿಸಿದೆ ಎಂದು ವರದಿ ಹೇಳಿದೆ. ಜಾಗತಿಕ ಮಾನದಂಡಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂಟರ್ನೆಟ್ ಕೆೈಗೆಟುಕುವಂತಿದೆ, ಆದರೆ ಸುಧಾರಣೆಗೆ ಇನ್ನೂ ಅವಕಾಶವಿದೆ ಅಧ್ಯಯನ ಹೇಳಿದೆ.