ಏಷ್ಯಾ ಕಪ್ ಇನ್ನೂ ಪ್ರಾರಂಭವಾಗಿಲ್ಲ, ಆದರೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಹೈವೋಲ್ಟೆಜ್ ಮ್ಯಾಚ್ ನೋಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಭಾರತವು ವಿಶ್ವ ಕಪ್ ನಲ್ಲಿ ಮೊದಲ ಬಾರಿಗೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೋತಾಗ ಅನೇಕ ಅಪಹಾಸ್ಯಗಳು ಕೇಳಿಬಂದಿದ್ದವು.
ಅಕ್ಟೋಬರ್ 24, 2021ರಲ್ಲಿ ಪಾಕಿಸ್ತಾನವು 10 ವಿಕೆಟ್ಗಳಿಂದ ಪಂದ್ಯ ಗೆದ್ದಿತು. ಆದರೆ ಎರಡು ರಾಷ್ಟ್ರಗಳ ನಡುವಿನ ಜಾಲತಾಣದಲ್ಲಿನ ತಮಾಷೆ ಇಂದಿಗೂ ನಿಂತಿಲ್ಲ.
ಇದೀಗ ಬಹು ನಿರೀಕ್ಷಿತ ಏಷ್ಯಾ ಕಪ್ 2022 ಶನಿವಾರದಿಂದ (ಆಗಸ್ಟ್ 27) ಆರಂಭಗೊಳ್ಳಲಿದ್ದು, ಮರುದಿನ ಭಾರತ- ಪಾಕಿಸ್ತಾನ ತಂಡ ಪರಸ್ಪರ ಎದುರು ಗೊಳ್ಳಲಿದೆ.
ಆದರೆ, ಈಗಲೇ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ನಲ್ಲಿ ಪಂದ್ಯದ ಬಗ್ಗೆ ಈಗಾಗಲೇ ಸಾಕಷ್ಟು ಮಾತುಗಳು ಆರಂಭವಾಗಿದೆ. ಟ್ವಿಟರ್ನಲ್ಲಿ ಟಾಪ್-ಟ್ರೆಂಡಿಂಗ್ ಹ್ಯಾಶ್ಟ್ಯಾಗ್ ಆಗಿ ಜಾಗವನ್ನು ಪಡೆದುಕೊಳ್ಳುತ್ತಿದೆ.
ಎರಡೂ ಕಡೆಯ ಅಭಿಮಾನಿಗಳು ಮೀಮ್ಗಳೊಂದಿಗೆ ಯುದ್ಧಕ್ಕೆ ಸಿದ್ಧರಾಗುತ್ತಿದ್ದಾರೆ. ಆಗಾಗ್ಗೆ ಪರಸ್ಪರ ಕೊಟ್ಟುಕೊಳ್ಳುತ್ತಿದ್ದಾರೆ. ವಿರಾಟ್ ಕೊಹ್ಲಿ ಸುಮಾರು ಆರು ವಾರಗಳ ವಿರಾಮದ ನಂತರ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲು ಸಿದ್ಧರಾಗಿದ್ದಾರೆ. ಪಾಕಿಸ್ತಾನದ ಅನುಭವಿ ಸ್ಪಿನ್ನರ್ ಯಾಸಿರ್ ಶಾ, ಕೊಯ್ಲಿ ಶಕ್ತಿಯನ್ನು ಚೆನ್ನಾಗಿ ಅರಿತಿದ್ದು, ಏಷ್ಯಾಕಪ್ನಲ್ಲಿ ವಿರಾಟ್ ಕೊಹ್ಲಿಯನ್ನು ಕಡಿಮೆ ಅಂದಾಜು ಮಾಡಬೇಡಿ ಎಂದು ತಮ್ಮ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
https://twitter.com/Hassoo007/status/1561957377389350912?ref_src=twsrc%5Etfw%7Ctwcamp%5Etweetembed%7Ctwterm%5E1561957377389350912%7Ctwgr%5Eb904f7587f47cc118a3c0ed6102c10d5d45b089d%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fasia-cup-2022-india-pakistan-fans-twitter-memes-funny-banter-shaheen-afridi-bumrah-5805559.html
https://twitter.com/Irr_Bayi/status/1561662323026104320?ref_src=twsrc%5Etfw%7Ctwcamp%5Etweetembed%7Ctwterm%5E1561662323026104320%7Ctwgr%5Eb904f7587f47cc118a3c0ed6102c10d5d45b089d%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fasia-cup-2022-india-pakistan-fans-twitter-memes-funny-banter-shaheen-afridi-bumrah-5805559.html