ಶ್ರೀನಗರ: ಸೋಹನ್ ರಘುವಂಶಿ ಎಂಬ ಜಮ್ಮು- ಕಾಶ್ಮೀರ ಪೊಲೀಸ್ ಸಿಬ್ಬಂದಿಯೊಬ್ಬ ಹಾಡಿದ ಕೊರೊನಾ ಜಾಗೃತಿ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಸೋಹನ್ ರಘುವಂಶಿ ಅವರು “ಯೆ ಕೊರೊನಾ ಬಡಾ ಬದ್ನಾಮ ಹೇ” ಎಂಬ ಹಾಡನ್ನು ಕಟ್ಟಿ, ಸ್ವಂತ ಸಂಗೀತ ಸಂಯೋಜನೆ ಮಾಡಿ, ಹಾಡಿದ್ದಾರೆ. ಸಾಮಾಜಿಕ ಅಂತರ, ಕೈ ತೊಳೆದುಕೊಳ್ಳುವ ವಿಧಾನ ಮುಂತಾದ ಜಾಗೃತಿ ಆ ಹಾಡಿನಲ್ಲಿದೆ.
ಕೊರೊನಾ ವೈರಸ್ ಪ್ರಹಾರದಿಂದ ವಿಶ್ವದ ಜನ ತತ್ತರಿಸಿದ್ದಾರೆ. ಹಲವು ರಾಷ್ಟ್ರಗಳು ಇನ್ನೂ ಲಾಕ್ಡೌನ್ ಆಗೇ ಇವೆ. ವೈರಸ್ ಜಾಗೃತಿಗಾಗಿ ಸಾಕಷ್ಟು ಜನ ವಿವಿಧ ಮಾದರಿಗಳನ್ನು ಅನುಸರಿಸುತ್ತಿದ್ದಾರೆ. ಅದರಲ್ಲಿ ಹಾಡುಗಳು ಸಾಕಷ್ಟು ಪ್ರಸಿದ್ಧವಾಗುತ್ತಿವೆ.