
ವಿಡಿಯೋದಲ್ಲಿ ಪಾರ್ಕ್ ಮಾಡಲಾಗಿದ್ದ ಬೈಕ್ ಒಂದು ತನ್ನಿಂದ ತಾನೇ ಚಲಾವಣೆ ಆಗೋದನ್ನ ಕಾಣಬಹುದಾಗಿದೆ. 30 ಸೆಕೆಂಡ್ಗಳ ಸಿಸಿ ಟಿವಿ ದೃಶ್ಯಾವಳಿಯನ್ನ ಅಂಬೇರ್ ಝೈದಿ ಎಂಬ ಟ್ವಿಟರ್ ಖಾತೆ ಮೂಲಕ ಶೇರ್ ಮಾಡಲಾಗಿದೆ. ಇದನ್ನ ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಸಿಸಿ ಟಿವಿ ದೃಶ್ಯಾವಳಿಯಲ್ಲಿ, ಎರಡು ಬೈಕ್ಗಳನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿರೋದನ್ನ ನೀವು ಕಾಣಬಹುದು. ಕೆಲವೇ ಕ್ಷಣಗಳಲ್ಲಿ ಒಂದು ಬೈಕ್ ತನ್ನಿಂದ ತಾನೇ ಚಲಿಸೋಕೆ ಆರಂಭಿಸುತ್ತೆ. ವೃತ್ತಾಕಾರವಾಗಿ ಸವಾರಿ ಮಾಡಿದ ಬೈಕ್ ಬಳಿಕ ಬಿದ್ದು ಹೋಗಿದೆ.