alex Certify BIG NEWS: ಲಾಕ್ ಡೌನ್ ನಂತ್ರವೂ ಸರ್ಕಾರಿ ನೌಕರರಿಗೆ ಮುಂದುವರೆಯಲಿದೆ ‘ವರ್ಕ್ ಫ್ರಂ ಹೋಂ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಾಕ್ ಡೌನ್ ನಂತ್ರವೂ ಸರ್ಕಾರಿ ನೌಕರರಿಗೆ ಮುಂದುವರೆಯಲಿದೆ ‘ವರ್ಕ್ ಫ್ರಂ ಹೋಂ’

ಲಾಕ್ ಡೌನ್ ನಂತರವೂ ಕೇಂದ್ರ ಸರ್ಕಾರಿ ನೌಕರರಿಗೆ ಮನೆಯಿಂದ ಕೆಲಸ ಮಾಡಲು ಅನುಮತಿ ಸಿಗುವ ಸಾಧ್ಯತೆಯಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಗುರುವಾರ ಈ ಬಗ್ಗೆ ಕರಡು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರವು ಸುಮಾರು 48.34 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಮಾರ್ಗಸೂಚಿಗಳನ್ನು ಪ್ರಸ್ತುತಪಡಿಸಿದ ಡಿಒಪಿಟಿ, ಕೋವಿಡ್ -19 ರ ದೃಷ್ಟಿಯಿಂದ ಇದು ಒಂದು ವಿಶಿಷ್ಟ ಪ್ರಯೋಗ ಎಂದಿದೆ.

ನೌಕರರಿಗೆ ಅಗತ್ಯವಿರುವ ಲ್ಯಾಪ್‌ಟಾಪ್ / ಡೆಸ್ಕ್ ಟಾಪ್ ಇತ್ಯಾದಿಗಳನ್ನು ಸಂಬಂಧಪಟ್ಟ ಸಚಿವಾಲಯಗಳು ಒದಗಿಸಲಿವೆ.  ಅಂತರ್ಜಾಲದ ಖರ್ಚನ್ನೂ ಸರ್ಕಾರ ಪಾವತಿಸಲಿದೆ.  ಅಗತ್ಯವಿದ್ದರೆ ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಿದೆ. ಈ ಬಗ್ಗೆ ಮೇ 21 ರವರೆಗೆ ಎಲ್ಲಾ ಕೇಂದ್ರ ಸರ್ಕಾರದ ಇಲಾಖೆಗಳಿಂದ ಪ್ರತಿಕ್ರಿಯೆ ಕೇಳಲಾಗಿದೆ. ಪ್ರತಿಕ್ರಿಯೆ ಬಂದ ಮೇಲೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.

ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ನಡೆಸುತ್ತಿರುವ ವಿಡಿಯೋ ಕಾನ್ಫರೆನ್ಸಿಂಗ್ ಮತ್ತು ಇ-ಆಫೀಸ್ ಮೂಲಕ, ವಿವಿಧ ಸಚಿವಾಲಯಗಳು ಮನೆಯಿಂದ ಕೆಲಸ ಮಾಡಲು ಯಶಸ್ವಿಯಾಗಿವೆ. ನೌಕರರ ಸಾಮಾಜಿಕ ಅಂತರ ಮತ್ತು ಸುರಕ್ಷತೆಗಾಗಿ ಈ ಪ್ರಕ್ರಿಯೆಯನ್ನು ಮುಂದಿನ ದಿನಗಳಲ್ಲೂ ಮುಂದುವರೆಸುವ ಸಾಧ್ಯತೆಯಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...