alex Certify ಕೊರೊನಾ ಲಸಿಕೆ ಹಾಕಲು ಬಂದ ಅಧಿಕಾರಿಗಳಿಗೆ ಗ್ರಾಮಸ್ಥರ ಆವಾಜ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಹಾಕಲು ಬಂದ ಅಧಿಕಾರಿಗಳಿಗೆ ಗ್ರಾಮಸ್ಥರ ಆವಾಜ್..!

ಮಧ್ಯ ಪ್ರದೇಶದಲ್ಲಿ ಕೊರೊನಾ ಕೇಸ್​ ಹೆಚ್ಚಾಗುತ್ತಲೇ ಇದ್ದು ರಾಜ್ಯದಲ್ಲಿ ಏಪ್ರಿಲ್​ 30ರವರೆಗೆ ಲಾಕ್​ಡೌನ್​ ಹೇರಲಾಗಿದೆ. ಇದರ ಜೊತೆಯಲ್ಲಿ ಕೊರೊನಾ ವೈರಸ್​ನಿಂದ ಜನರನ್ನ ಬಚಾವು ಮಾಡೋಕೆ ಲಸಿಕೆ ಪ್ರಯೋಗವನ್ನೂ ಮಾಡಲಾಗ್ತಿದೆ. ಆದರೆ ಸಿವ್ನಿ ಜಿಲ್ಲೆಯ ಗ್ರಾಮವೊಂದರಲ್ಲಿ ಲಸಿಕೆ ಹಾಕಲು ಬಂದ ಆರೋಗ್ಯ ಸಿಬ್ಬಂದಿಗೇ ಗ್ರಾಮಸ್ಥರು ನಿರ್ಬಂಧ ಹೇರಿದ್ದಾರೆ.

ಗೋರಖ್​​ಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಆರೋಗ್ಯ ಸಿಬ್ಬಂದಿ ಇಲ್ಲಿ ಭೇಟಿ ನೀಡುತ್ತಿದ್ದಂತೆಯೇ ದೊಣ್ಣೆ ಹಿಡಿದು ಬಂದ ಆರೇಳು ಮಂದಿ ಮಹಿಳೆಯರು ನಾವು ಲಸಿಕೆಯನ್ನ ಹಾಕಿಸಿಕೊಳ್ಳೋದೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದೇ ವೇಳೆ ಈ ಸ್ಥಳದಲ್ಲಿ ಹಾಜರಿದ್ದ ಪಂಚಾಯತ್​ ನೋಡಲ್​ ಅಧಿಕಾರಿ ಎದುರಿಗೇ ಮಹಿಳೆಯರು ಈ ರೀತಿ ವರ್ತಿಸಿದ್ದಾರೆ.

ಈ ಗ್ರಾಮದಲ್ಲಿ ಕೊರೊನಾ ಲಸಿಕೆ ವಿಚಾರವಾಗಿ ಸಾಕಷ್ಟು ತಪ್ಪು ಅಭಿಪ್ರಾಯವಿದೆ. ಈ ಗ್ರಾಮದಲ್ಲಿ ಲಸಿಕೆ ಕಾರ್ಯಕ್ರಮ ನಡೆಸಿ ಜಿಲ್ಲಾ ಪಂಚಾಯತ್​ ಸಿಇಓ ನೀಡಿದ ನೋಟಿಸ್​ ಆಧರಿಸಿ ಗ್ರಾಮಕ್ಕೆ ಬಂದ ಆರೋಗ್ಯ ಸಿಬ್ಬಂದಿಗೆ ದೊಣ್ಣೆಯಿಂದ ಸ್ವಾಗತ ದೊರಕಿದೆ. ಇನ್ನು ಮಹಿಳೆಯರು ದೊಣ್ಣೆ ಹಿಡಿದು ಅಧಿಕಾರಿಗಳಿಗೆ ಬೆದರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಈ ಮಹಿಳೆಯರನ್ನ ಒಪ್ಪಿಸುವಲ್ಲಿ ಆರೋಗ್ಯ ಸಿಬ್ಬಂದಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಜನರು ಕೊರೊನಾ ವೈರಸ್​ ಬಗ್ಗೆ ಭಯ ಹೊಂದಿದ್ದಾರೆ ಆದರೆ ಲಸಿಕೆ ವಿಚಾರದಲ್ಲಿ ಸಾಕಷ್ಟು ತಪ್ಪು ತಿಳುವಳಿಕೆ ಹೊಂದಿರೋದೇ ಈ ಅಚಾತುರ್ಯಕ್ಕೆ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...