alex Certify ಸರಕು ರೈಲನ್ನೂ ಚಲಾಯಿಸಿ ಸೈ ಎನಿಸಿಕೊಂಡ ಮೊದಲ ಭಾರತೀಯ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರಕು ರೈಲನ್ನೂ ಚಲಾಯಿಸಿ ಸೈ ಎನಿಸಿಕೊಂಡ ಮೊದಲ ಭಾರತೀಯ ಮಹಿಳೆ..!

2021ರ ಹೊಸ ವರ್ಷದಿಂದ ಭಾರತೀಯ ಮಹಿಳೆಯರು ತಾವು ಈವರೆಗೆ ಕಾಲಿಡದ ಕ್ಷೇತ್ರಗಳಲ್ಲೂ ಛಾಪನ್ನ ಮೂಡಿಸೋಕೆ ಪಣ ತೊಟ್ಟಂತೆ ಕಾಣುತ್ತಿದೆ. ಟ್ಯಾಕ್ಸಿ ಓಡಿಸೋದ್ರಿಂದ ಹಿಡಿದು ಬಾಹ್ಯಾಕಾಶದವರೆಗೂ ಕಾಲಿಟ್ಟಿರೋ ಮಹಿಳೆಯರು ಇದೀಗ ಟ್ರೇನ್​ನ ಸಾರಥಿ ಕೂಡ ಆಗಿದ್ದಾರೆ.

ಜನವರಿ 5ನೇ ತಾರೀಖಿನಂದು ಮಹಾರಾಷ್ಟ್ರದಿಂದ ಗುಜರಾತ್​ಗೆ ಸಂಚರಿಸಿದ ಸರಕು ರೈಲು ಮೊಟ್ಟ ಮೊದಲ ಮಹಿಳಾ ಡ್ರೈವರ್​ನ್ನು ಕಂಡಿದೆ. ಮೂವರು ಮಹಿಳೆಯರಾದ ಆಕಾಂಕ್ಷಾ ರಾಯ್​, ಉದಿತಾ ವರ್ಮಾ ಹಾಗೂ ಕುಂಕುಮ್​ ಸೂರಜ್​ ಡೊಂಗ್ರೆ ಪಶ್ಚಿಮ ರೈಲ್ವೆಯ ಮುಂಬೈ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.

ಗೂಡ್ಸ್ ಗಾರ್ಡ್​ ಆಗಿದ್ದ ಆಕಾಂಕ್ಷಾ ರಾಯ್ ಈ ರೈಲನ್ನ ಚಲಾವಣೆ ಮಾಡಿದ್ರೆ ಡೊಂಗ್ರೆ ಲೊಕೋ ಪೈಲಟ್​ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಉದಿತಾ ವರ್ಮಾ ಸೀನಿಯರ್​ ಅಸಿಸ್ಟೆಂಟ್ ಲೋಕೋ ಪೈಲಟ್​ ಆಗಿ ಕೆಲಸ ಮಾಡಿದ್ದಾರೆ ಅಂತಾ ಮುಂಬೈ ಮಿರರ್ ಪತ್ರಿಕೆ ವರದಿ ಮಾಡಿದೆ. ಈ ಮೂಲಕ ಆಕಾಂಕ್ಷಾ ರಾಯ್​ ಭಾರತದಲ್ಲಿ ಸರಕು ರೈಲನ್ನ ಚಲಾವಣೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

— Western Railway (@WesternRly) January 6, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...