
ಜನವರಿ 5ನೇ ತಾರೀಖಿನಂದು ಮಹಾರಾಷ್ಟ್ರದಿಂದ ಗುಜರಾತ್ಗೆ ಸಂಚರಿಸಿದ ಸರಕು ರೈಲು ಮೊಟ್ಟ ಮೊದಲ ಮಹಿಳಾ ಡ್ರೈವರ್ನ್ನು ಕಂಡಿದೆ. ಮೂವರು ಮಹಿಳೆಯರಾದ ಆಕಾಂಕ್ಷಾ ರಾಯ್, ಉದಿತಾ ವರ್ಮಾ ಹಾಗೂ ಕುಂಕುಮ್ ಸೂರಜ್ ಡೊಂಗ್ರೆ ಪಶ್ಚಿಮ ರೈಲ್ವೆಯ ಮುಂಬೈ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.
ಗೂಡ್ಸ್ ಗಾರ್ಡ್ ಆಗಿದ್ದ ಆಕಾಂಕ್ಷಾ ರಾಯ್ ಈ ರೈಲನ್ನ ಚಲಾವಣೆ ಮಾಡಿದ್ರೆ ಡೊಂಗ್ರೆ ಲೊಕೋ ಪೈಲಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಉದಿತಾ ವರ್ಮಾ ಸೀನಿಯರ್ ಅಸಿಸ್ಟೆಂಟ್ ಲೋಕೋ ಪೈಲಟ್ ಆಗಿ ಕೆಲಸ ಮಾಡಿದ್ದಾರೆ ಅಂತಾ ಮುಂಬೈ ಮಿರರ್ ಪತ್ರಿಕೆ ವರದಿ ಮಾಡಿದೆ. ಈ ಮೂಲಕ ಆಕಾಂಕ್ಷಾ ರಾಯ್ ಭಾರತದಲ್ಲಿ ಸರಕು ರೈಲನ್ನ ಚಲಾವಣೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.