ಪಣಜಿ: ಕಡಲ ತೀರಗಳಲ್ಲಿ ಪ್ರವಾಸಿಗರ ರಕ್ಷಣಾ ಕ್ಷೇತ್ರಗಳಲ್ಲಿ ಪುರುಷರದ್ದೇ ಕಾರುಬಾರು. ಆದರೆ, ಗೋವಾದಲ್ಲಿನ್ನು ಮಹಿಳೆಯರೂ ಲೈಫ್ ಗಾರ್ಡ್ ಗಳಾಗಿ ಕಾಣಲಿದ್ದಾರೆ.
ಹೌದು, ಗೋವಾದಲ್ಲಿ ಲೈಫ್ ಗಾರ್ಡ್ ಗಳನ್ನು ನೇಮಕ ಮಾಡಿಕೊಳ್ಳುವ ನಿರ್ಧಾರ ಮಾಡಿರುವ ದೃಷ್ಟಿ ಮರೈನ್ ಸಂಸ್ಥೆ ಅದಕ್ಕೋಸ್ಕರ ಈಗಾಗಲೇ ಮೂವರು ಮಹಿಳೆಯರನ್ನು ನೇಮಿಸಿಕೊಂಡು ತರಬೇತಿ ನೀಡುತ್ತಿದೆ.
ಚಲಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನಿಂದ ಪೆಪ್ಪರ್ ಸ್ಪ್ರೇ
ದೃಷ್ಟಿ ಮರೈನ್ ಗೋವಾದಲ್ಲಿ 13 ವರ್ಷಗಳಿಂದ ಜೀವ ರಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಕಡಲತೀರ ಸಹಿತ ಅಗತ್ಯವಿದ್ದೆಡೆ ನಿಯೋಜಿಸುತ್ತಾ ಬಂದಿದೆ. ಉತ್ತರ ಗೋವಾದ 16 ಕಡಲ ತೀರ ಹಾಗೂ ದಕ್ಷಿಣ ಗೋವಾದ 22 ಕಡಲ ತೀರದಲ್ಲಿ ಜೀವ ರಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ದೂದ್ ಸಾಗರ್ ಜಲಪಾತವೂ ಸೇರಿದಂತೆ ಎಲ್ಲ ಕಡೆಗಳಲ್ಲಿ 400 ಕ್ಕೂ ಅಧಿಕ ಲೈಫ್ ಗಾರ್ಡ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ.