alex Certify 15 ವರ್ಷಗಳ ಹಿಂದೆ ರೈಲಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಎಲೆ ಈಗ ಪತ್ತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

15 ವರ್ಷಗಳ ಹಿಂದೆ ರೈಲಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಎಲೆ ಈಗ ಪತ್ತೆ…!

ಹದಿನೈದು ವರ್ಷಗಳ ಹಿಂದೆ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಗಣೇಶನ ಚಿನ್ನದ ಎಲೆಯೊಂದು ಇದೀಗ ಸಿಕ್ಕ ಘಟನೆ ಥಾಣೆಯಲ್ಲಿ ಜರುಗಿದೆ.

5.8 ಮಿ.ಗ್ರಾಂ ತೂಗುವ ಎಲೆಯ ಬೆಲೆ 2005ರಲ್ಲಿ 400 ರೂ.ಗಳು ಇತ್ತು. ಇಂದಿನ ದಿನಮಾನದಲ್ಲಿ ಇದರ ಬೆಲೆ 25 ಸಾವಿರ ರೂ.ಗಳಷ್ಟಿದೆ. ಈ ಎಲೆಯನ್ನು ಪತ್ತೆ ಮಾಡಿದ ರೈಲ್ವೇ ಪೊಲೀಸರು ಮಹಿಳೆಗೆ ಹಿಂದಿರುಗಿಸಿದ್ದಾರೆ.

“ಗಣೇಶನ ಕೆತ್ತನೆ ಇರುವ ಈ ಎಲೆಯನ್ನು ಹೊಸ ವರ್ಷದ ಹಿಂದಿನ ದಿನದಂದೇ ನಾವು ರೇಶ್ಮಾ ಅಮೃತೆಗೆ ಹಿಂದಿರುಗಿಸಿದ್ದೇವೆ. ನಾವು ಅವರ ಮನೆಯನ್ನು ಬಹಳಷ್ಟು ಬಾರಿ ಭೇಟಿ ಕೊಟ್ಟಿದ್ದೆವು. ಆಧಾರ್‌ ಕಾರ್ಡ್ ಮಾಹಿತಿ ಸೇರಿದಂತೆ ಬಹಳಷ್ಟು ಖಾತ್ರಿಗಳನ್ನು ಮಾಡಿಕೊಂಡ ಬಳಿಕ ನಾವು ಈ ವಸ್ತುವನ್ನು ಆಕೆಗೆ ಹಿಂದಿರುಗಿಸಿದ್ದೇವೆ” ಎಂದು ಥಾಣೆಯಲ್ಲಿ ಕೆಲಸ ಮಾಡುವ ರೈಲ್ವೇ ಪೊಲೀಸ್‌ನ ಹಿರಿಯ ಅಧಿಕಾರಿ ಎನ್‌.ಜಿ. ಖಡ್ಕಿಕರ್‌ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...