
ಹದಿನೈದು ವರ್ಷಗಳ ಹಿಂದೆ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಗಣೇಶನ ಚಿನ್ನದ ಎಲೆಯೊಂದು ಇದೀಗ ಸಿಕ್ಕ ಘಟನೆ ಥಾಣೆಯಲ್ಲಿ ಜರುಗಿದೆ.
5.8 ಮಿ.ಗ್ರಾಂ ತೂಗುವ ಎಲೆಯ ಬೆಲೆ 2005ರಲ್ಲಿ 400 ರೂ.ಗಳು ಇತ್ತು. ಇಂದಿನ ದಿನಮಾನದಲ್ಲಿ ಇದರ ಬೆಲೆ 25 ಸಾವಿರ ರೂ.ಗಳಷ್ಟಿದೆ. ಈ ಎಲೆಯನ್ನು ಪತ್ತೆ ಮಾಡಿದ ರೈಲ್ವೇ ಪೊಲೀಸರು ಮಹಿಳೆಗೆ ಹಿಂದಿರುಗಿಸಿದ್ದಾರೆ.
“ಗಣೇಶನ ಕೆತ್ತನೆ ಇರುವ ಈ ಎಲೆಯನ್ನು ಹೊಸ ವರ್ಷದ ಹಿಂದಿನ ದಿನದಂದೇ ನಾವು ರೇಶ್ಮಾ ಅಮೃತೆಗೆ ಹಿಂದಿರುಗಿಸಿದ್ದೇವೆ. ನಾವು ಅವರ ಮನೆಯನ್ನು ಬಹಳಷ್ಟು ಬಾರಿ ಭೇಟಿ ಕೊಟ್ಟಿದ್ದೆವು. ಆಧಾರ್ ಕಾರ್ಡ್ ಮಾಹಿತಿ ಸೇರಿದಂತೆ ಬಹಳಷ್ಟು ಖಾತ್ರಿಗಳನ್ನು ಮಾಡಿಕೊಂಡ ಬಳಿಕ ನಾವು ಈ ವಸ್ತುವನ್ನು ಆಕೆಗೆ ಹಿಂದಿರುಗಿಸಿದ್ದೇವೆ” ಎಂದು ಥಾಣೆಯಲ್ಲಿ ಕೆಲಸ ಮಾಡುವ ರೈಲ್ವೇ ಪೊಲೀಸ್‌ನ ಹಿರಿಯ ಅಧಿಕಾರಿ ಎನ್.ಜಿ. ಖಡ್ಕಿಕರ್ ತಿಳಿಸಿದ್ದಾರೆ.