ಜೈಪುರ್: ರಾಜಸ್ಥಾನದ ಸಾವಾಯಿಮಾಧೋಪುರ್ ಜಿಲ್ಲೆಯಲ್ಲಿ ಮಹಿಳೆ ಮೇಲೆ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.
40 ವರ್ಷದ ಮಹಿಳೆ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಒಂದು ತಿಂಗಳಿಂದ ಊರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಸಾವಾಯಿಮಾಧೋಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ಆಕೆ ತಂಗಿದ್ದು ಗುರುವಾರ ರಾತ್ರಿ ನಡೆದುಕೊಂಡೇ ಜೈಪುರ್ ಕಡೆಗೆ ಹೊರಟಿದ್ದಾರೆ.
ಈ ವೇಳೆ ದಾರಿ ತಪ್ಪಿದ ಮಹಿಳೆ ಶಾಲೆಯೊಂದರ ಬಳಿ ಉಳಿದುಕೊಂಡಿದ್ದು ರಾತ್ರಿ ವೇಳೆ ಅಲ್ಲಿಗೆ ಬಂದ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸವಾಯಿಮಾಧೋಪುರ್ ಪೊಲೀಸ್ ಅಧೀಕ್ಷಕ ಸುಧೀರ್ ಚೌಧರಿ ಈ ಕುರಿತು ಮಾಹಿತಿ ನೀಡಿದ್ದು, ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.