ಮಿತಿಮೀರಿದ ಜನಸಂಖ್ಯೆಯ ಅಡ್ಡಪರಿಣಾಮಗಳನ್ನು ದಿನಂಪ್ರತಿ ಅನುಭವಿಸುತ್ತಲೇ ಇದ್ದೇವೆ. ಕೋವಿಡ್ ಸಾಂಕ್ರಮಿಕದ ಸಂಕಟದ ಕಾಲಘಟ್ಟದಲ್ಲಿ ಈ ವಿಷಯ ಇನ್ನಷ್ಟು ಹೆಚ್ಚಾಗಿಯೇ ಅರಿವಿಗೆ ಬರುತ್ತಿದೆ.
ಬಿಹಾರದಲ್ಲಿ ಮಹಿಳಾ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸೂಕ್ತ ವ್ಯವಸ್ಥೆ ಇಲ್ಲದೇ ಇದ್ದ ಕಾರಣ ಆಕೆಯನ್ನು ಕಸ ಒಯ್ಯುವ ಗಾಡಿಯಲ್ಲೇ ಕೊಂಡೊಯ್ಯಬೇಕಾದ ಹೀನಾಯ ಪರಿಸ್ಥಿತಿಯೊಂದು ಘಟಿಸಿದೆ.
ಇಲ್ಲಿನ ಚಂಪರಣ್ ಜಿಲ್ಲೆಯ ಊರೊಂದರಲ್ಲಿರುವ ವೃದ್ಧೆಗೆ ಉಸಿರಾಟದ ಸಮಸ್ಯೆ ಹಾಗೂ ತೀವ್ರ ಜ್ವರ ಕಾಣಿಸಿಕೊಂಡ ವೇಳೆ ಅವರನ್ನು ಆಸ್ಪತ್ರೆಗೆ ಸಾಗಿಸಲು ಸೂಕ್ತ ವ್ಯವಸ್ಥೆ ಇಲ್ಲದೇ ಇದ್ದ ಕಾರಣ, ಆಕೆಯ ಕುಟುಂಬದ ಮಂದಿ ಆಕೆಯನ್ನು ಹೀಗೆ ಕಸದ ಗಾಡಿಯಲ್ಲಿ ಇಲ್ಲಿನ ಭಾಗಾ ಉಪವಿಭಾಗದ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.
ಏರ್ಪೋರ್ಟ್ ಫುಡ್ಕೌಂಟರ್ನಲ್ಲಿ ಕೂತು ಆಹಾರ ಸವಿದ ಕೋತಿ..! ವಿಡಿಯೋ ವೈರಲ್
ಈ ಕುರಿತು ಪ್ರತಿಕ್ರಿಯಿಸಿದ ಬಗಾಹಾ ಉಪವಿಭಾಗದ ಮ್ಯಾಜಿಸ್ಟ್ರೇಟ್ ಶೇಖರ್ ಆನಂದ್, “ಈ ಕುಟುಂಬಕ್ಕೆ ಆಂಬುಲೆನ್ಸ್ ಸೇವೆ ನಿರಾಕರಿಸಿಲ್ಲ. ಅವರನ್ನು ಹಾಗೆ ಗಾಡಿಯಲ್ಲಿ ಕರೆತರುವ ಅಗತ್ಯವಿರಲಿಲ್ಲ. ನಮ್ಮಲ್ಲಿ ಆಂಬುಲೆನ್ಸ್ ಸೇವೆಗೆಂದು ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳಿವೆ. ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್‌ಗಳನ್ನು ಜನರು ಬಳಸಿಕೊಳ್ಳಬೇಕು” ಎಂದು ತಿಳಿಸಿದ್ದಾರೆ. ಮೇ 19ರ ವೇಳೆಗೆ ವರದಿಯಾದಂತೆ ಬಿಹಾರದಲ್ಲಿ ಒಟ್ಟಾರೆ 58,610 ಸಕ್ರಿಯ ಕೋವಿಡ್ ಪ್ರಕರಣಗಳಿವೆ.