ಅಕ್ರಮ ಸಂಬಂಧಕ್ಕಾಗಿ ತನ್ನ ಅತ್ತೆಯನ್ನ ಸಾಯಿಸಿದ 28 ವರ್ಷದ ಮಹಿಳೆ ಹಾಗೂ ಆಕೆಯ ಪ್ರಿಯಕರನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ರಾಧಾ ಲಾಕೆ ಎಂಬಾಕೆ ತನ್ನ ಪ್ರಿಯಕರ ದೀಪಕ್ ಮಾನೆ ಜೊತೆ ಸೇರಿ 57 ವರ್ಷದ ಸುಲುಬಾಯ್ ಲಾಕೆ ಎಂಬವರನ್ನ ಹತ್ಯೆಗೈದಿದ್ದಾರೆ ಅಂತ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಲುಬಾಯಿ ಲಾಕೆ ಪುತ್ರನ ಜೊತೆ ವಿವಾಹವಾಗಿದ್ದ ರಾಧಾ ಲಾಕೆ, ಪ್ರಿಯಕರ ದೀಪಕ್ ಮಾನೆ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ಸುಲುಬಾಯಿಗೆ ತಿಳೀತಾ ಇದ್ದಂತೆ ಮಗನಿಗೆ ಹೇಳೋದಾಗಿ ರಾಧಾಗೆ ಬೆದರಿಕೆ ಒಡ್ಡಿದ್ದಾಳೆ. ಇದರಿಂದ ಆಕ್ರೋಶಗೊಂಡ ರಾಧಾ ತನ್ನ ಪ್ರಿಯಕರನ ಜೊತೆ ಸೇರಿ ಸುಲುಬಾಯಿಯನ್ನ ಹತ್ಯೆಗೈದಿದ್ದಾಳೆ.